ಆರ್ಸಿಬಿ ಬೆಂಗಳೂರು ಮತ್ತು ಚೆನ್ನೈ ನಡುವೆ ನಡೆಯಲಿರುವ ಐಪಿಎಲ್ ಪಂದ್ಯಕ್ಕೆ ಇಡೀ ದೇಶ ಸಜ್ಜಾಗಿ ನಿಂತಿದೆ. ಯಾಕಂದ್ರೆ ಆರ್ಸಿಬಿ ಮುಂದಿನ ಹಂತಕ್ಕೆ ಹೋಗಲು ಈ ಪಂದ್ಯ ಗೆಲ್ಲಲೇಬೇಕಿದೆ. ಇನ್ನು ಚೆನ್ನೈ ತಂಡಕ್ಕೆ ಕೂಡ ಈ ಪಂದ್ಯ ಮಾಡು ಇಲ್ಲವೇ ಮಡಿ ಆಗಿದೆ. ಹೀಗಿದ್ದಾಗ ಆರ್ಸಿಬಿ ಮತ್ತು ಸಿಎಸ್ಕೆ ಪಂದ್ಯಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ. ಈ ಪಂದ್ಯ ವಿಶೇಷವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೀಗಾಗಿ ಕನ್ನಡಿಗರು ಕೂಡ ಟಿಕೆಟ್ ಖರೀದಿಗೆ ಮುಗಿಬಿದ್ದಿದ್ದಾರೆ. ಈ ನಡುವೆ, ಭರ್ಜರಿ ಮಳೆ ಮಧ್ಯೆ ಕೂಡ ಬೆಂಗಳೂರಿನಲ್ಲಿ ಈ ಪಂದ್ಯ ವಾತಾವರಣದ ಬಿಸಿ ಹೆಚ್ಚು ಮಾಡಿದೆ.
ಆರ್ಸಿಬಿ.. ಆರ್ಸಿಬಿ.. ಆರ್ಸಿಬಿ.. ಹೀಗೆ ಎಲ್ಲೆಲ್ಲೂ ಆರ್ಸಿಬಿ ತಂಡ ಟ್ರೆಂಡ್ ಹುಟ್ಟುಹಾಕಿ ಹವಾ ಎಬ್ಬಿಸಿದೆ. ನಮ್ಮ ಬೆಂಗಳೂರು ತಂಡವಾದ ಆರ್ಸಿಬಿ ಗೆದ್ದೇ ಗೆಲ್ಲುತ್ತೆ, ಉಪಾಂತ್ಯಕ್ಕೆ ತಲುಪಲಿದೆ ಅಂತಾ ಫ್ಯಾನ್ಸ್ ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ಆರ್ಸಿಬಿ ತಂಡ ಸಕಲ ಸಿದ್ಧತೆ ಆರಂಭಿಸಿದೆ. ಮತ್ತೊಂದು ಕಡೆ ಪಂದ್ಯ ನೋಡಲು ಕಾಯುತ್ತಿರುವ ಆರ್ಸಿಬಿ ಫ್ಯಾನ್ಸ್ ಎಲ್ಲೆಲ್ಲೂ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಆರ್ಸಿಬಿ ಮತ್ತು ಚೆನ್ನೈ ಪಂದ್ಯ ಹವಾ ಎಬ್ಬಿಸಿದೆ. ಹಾಗೇ ಟಿಕೆಟ್ಗೆ ಕೂಡ ಭಾರಿ ಡಿಮ್ಯಾಂಡ್ ಇದೆ. ವಿರಾಟ್ ಕೊಹ್ಲಿ ಈಗಾಗಲೇ ಐಪಿಎಲ್ 2024ರ ಟೂರ್ನಿಯಲ್ಲಿ ಆರ್ಸಿಬಿ ತಂಡದ ಪರವಾಗಿ 155 ಸ್ಟ್ರೈಕ್ ರೇಟ್ ಮೂಲಕ 661ಕ್ಕೂ ಹೆಚ್ಚು ರನ್ ಚಚ್ಚಿ ಬಿಸಾಡಿದ್ದಾರೆ. ಈ ಮೂಲಕ, ಐಪಿಎಲ್ ಅಖಾಡದಲ್ಲೂ ವಿರಾಟ್ ಕೊಹ್ಲಿ ಅವರ ಅಬ್ಬರ ಜೋರಾಗಿದೆ. ಹಾಗೇ ಆರ್ಸಿಬಿ ತಂಡ ಇದೀಗ ಮುಂದಿನ ಹಂತಕ್ಕೆ ಅಂದ್ರೆ ಪ್ಲೇ ಆಫ್ ಹಂತಕ್ಕೆ ಹೋಗಲು ಸಜ್ಜಾಗಿದೆ. ಇನ್ನೇನು ಆರ್ಸಿಬಿ ಒಂದು ಪಂದ್ಯ ಗೆದ್ದರೆ ಸಾಕು ಮುಂದಿನ ಹಂತಕ್ಕೆ ಹೋಗಲಿದೆ. ಈ ಮೂಲಕ ಆರ್ಸಿಬಿ ಟೀಂ ಕಪ್ ಗೆಲ್ಲುವುದು ಬಹುತೇಕ ಪಕ್ಕಾ ಆಗಲಿದೆ. ಮೊನ್ನೆ ದೆಹಲಿ ತಂಡದ ವಿರುದ್ಧ ಗೆದ್ದು ಬೀಗಿದ್ದ ಆರ್ಸಿಬಿ ತಂಡಕ್ಕೆ ಚೆನ್ನೈ ತಂಡ ಸವಾಲು ಎಸೆಯಲಿದೆ.