ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ಹಾವು ಕಡಿತ ಹಾಗೂ ಸಾವಿನ ಪ್ರಮಾಣ ಹೆಚ್ಚಳವಾಗಿದ್ದು, ಬೆಂಗಳೂರಿನಲ್ಲಿ ಆ್ಯಂಟಿ ಸ್ನೇಕ್ ವೀನೋಮ್ ಔಷಧ ಘಟಕ ಸ್ಥಾಪನೆಗೆ ಸರ್ಕಾರ ಚಿಂತನೆ ನಡೆಸಿದೆ.
DC v/s LSG: ರಾಹುಲ್ ಔಟ್ ಆದ ಬಳಿಕ ಎಲ್ಎಸ್ಜಿ ಮಾಲೀಕನಿಂದ ಕೆಟ್ಟ ರಿಯಾಕ್ಷನ್..!
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷದಿಂದ ಹಾವು ಕಡಿತ ಹಾಗೂ ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ. ಆರೋಗ್ಯ ಇಲಾಖೆ ಇದೀಗ ಈ ಬಗ್ಗೆ ತೀವ್ರ ನಿಗಾವಹಿಸಿದೆ. ಐಐಎಸ್ಸಿ ಸಹಯೋಗದೊಂದಿಗೆ ಆರೋಗ್ಯ ಇಲಾಖೆ ಅಧ್ಯಯನಕ್ಕೆ ಮುಂದಾಗಿದ್ದಲ್ಲದೆ, ಬೆಂಗಳೂರಿನಲ್ಲಿ ಆ್ಯಂಟಿ ಸ್ನೇಕ್ ವೀನೋಮ್ ಔಷಧ ಘಟಕ ಸ್ಥಾಪನೆಗೆ ಚಿಂತನೆ ನಡೆಸಿದೆ.
ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 2316 ಜನರಿಗೆ ಹಾವು ಕಡಿತವಾಗಿದೆ. 18 ಜನರು ವಿಷಕಾರಿ ಹಾವು ಕಡಿತದಿಂದ ಬಲಿಯಾಗಿದ್ದಾರೆ. ಇನ್ನು ಕಳೆದ ಮೂರು ವರ್ಷಗಳಲ್ಲಿ 13 ಸಾವಿರ ಜನರಿಗೆ ಹಾವು ಕಡಿತವಾಗಿದೆ. ಈ ಪೈಕಿ 46 ಮಂದಿ ಮೃತಪಟ್ಟಿದ್ದಾರೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಹಾವು ಕಡಿತಕ್ಕೆ ಈಗ ನೀಡುತ್ತಿರುವ ಆ್ಯಂಟಿ ಸ್ನೇಕ್ ವೀನೋಮ್ ಔಷಧಿ ಫಲಕಾರಿಯಾಗುತ್ತಿಲ್ಲ. ವಿವಿಧ ತಳಿಯ ವಿಷಕಾರಿಯಾದ ಹಾವುಗಳ ಕಡಿತಕ್ಕೆ ಈ ಆ್ಯಂಟಿ ಸ್ನೇಕ್ ವೀನೋಮ್ ಔಷಧಿ ಫಲಕಾರಿಯಾಗದೆ ಕೆಲವೊಂದು ಪ್ರಕರಣದಲ್ಲಿ ಜನ ಸಾವಿಗೀಡಾಗುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ರಾಜ್ಯದಲ್ಲಿ ಎಲ್ಲ ಹಾವು ತಳಿಗಳ ವಿಷದ ಬಗ್ಗೆ ಹಾಗೂ ಇದಕ್ಕೆ ಆ್ಯಂಟಿ ಸ್ನೇಕ್ ವೀನೋಮ್ ಔಷಧಿ ತಯಾರಿಕೆ ಬಗ್ಗೆ ಐಐಎಸ್ಸಿ ಸಹಯೋಗದೊಂದಿಗೆ ಅಧ್ಯಯನಕ್ಕೆ ಮುಂದಾಗಿದೆ.
ಆ್ಯಂಟಿ ಸ್ನೇಕ್ ವೀನೋಮ್ ಔಷಧಿ ಬಗ್ಗೆ ಐಐಎಸ್ಸಿ ಅಧ್ಯಯನಕ್ಕೆ ಮುಂದಾಗಿದ್ದು, ವರದಿ ಸಿದ್ಧಪಡಿಸಿದ ಬಳಿಕ ಬೆಂಗಳೂರಿನಲ್ಲಿ ಔಷಧ ತಯಾರಿಕಾ ಘಟಕ ಸ್ಥಾಪಿಸಲು ಆರೋಗ್ಯ ಇಲಾಖೆ ಯೋಚನೆ ಮಾಡಿದೆ. ತುರ್ತು ಬೇಡಿಕೆಗೆ ತಕ್ಕಷ್ಟು ಔಷಧ ಲಭ್ಯವಾಗುತ್ತಿಲ್ಲ. ರಾಜ್ಯದಲ್ಲಿಯೂ ಈ ಘಟಕ ತಯಾರಿಕೆ ಮಾಡಬೇಕು ಎಂದು ತಜ್ಞರು ಕೂಡ ಒತ್ತಾಯಿಸಿದ್ದಾರೆ. ಈಗ ಆರೋಗ್ಯ ಇಲಾಖೆ ಈ ಬಗ್ಗೆ ಅಧ್ಯಯನಕ್ಕೆ ಮುಂದಾಗಿದ್ದು ಹೊಸ ಆ್ಯಂಟಿ ಸ್ನೇಕ್ ವೀನೋಮ್ ಔಷಧಿ ಸಿದ್ದಪಡಿಸಲು ಮುಂದಾಗಿದೆ.