ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಹೀನಾಯವಾಗಿ ಸೋಲು ಕಂಡಿರುವ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡದ ಗೆಲ್ಲುವ ನಿರೀಕ್ಷೆಯಲ್ಲಿದೆ. ಇನ್ನೂ ಡು ಆರ್ ಡೈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಡೆಲ್ಲಿ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 208 ರನ್ಗಳಿಸಿತು.
ಆಟ ಆಡಲು ಹೋಗಿ ಮೂವರು ಸಾವು ಪ್ರಕರಣ.. ಹಿರಿಯ ನ್ಯಾಯಾಧೀಶರಿಂದ ಸ್ಥಳ ಪರಿಶೀಲನೆ!
ಮೊದಲ ಓವರ್ನಲ್ಲಿಯೇ ಡೆಲ್ಲಿಗೆ ಮೊದಲ ಹೊಡೆತ ಬಿತ್ತು. ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಜೇಕ್ ಫ್ರೇಸರ್ ಮೆಕ್ ಗುರ್ಕ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಇಂದಿನ ಪಂದ್ಯದಲ್ಲಿ ಅವರು ಅಬ್ಬರಿಸುತ್ತಾರೆ ಅಂತ ಎಲ್ಲ ಅಂದುಕೊಂಡಿದ್ದರು. ಪವರ್ಪ್ಲೇ ಮುಗಿಯುವ ವೇಳೆ ಡೆಲ್ಲಿ ಆರು ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 73 ರನ್ ಗಳಿಸಿತು
ಇನ್ನೂ ಡೆಲ್ಲಿ ಒಂಬತ್ತನೇ ಓವರ್ನಲ್ಲಿ ಎರಡನೇ ವಿಕೆಟ್ ಕಳೆದುಕೊಂಡಿತು. ಶಾಯ್ ಹೋಪ್ 27 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 38 ರನ್ ಗಳಿಸಿ ಔಟಾದರು. 12ನೇ ಓವರ್ನಲ್ಲಿ ಡೆಲ್ಲಿ ಮೂರನೇ ವಿಕೆಟ್ ಕಳೆದುಕೊಂಡಿತು. ಅಭಿಷೇಕ್ ಪೊರೆಲ್ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 58 ರನ್ ಗಳಿಸಿ ಔಟಾದರು. ಡೆಲ್ಲಿ ನಾಯಕ ರಿಷಬ್ ಪಂತ್ 23 ಎಸೆತಗಳಲ್ಲಿ 33 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.
ಆರಂಭಿಕ ಆಘಾತವಾದ್ರೂ ಡೆಲ್ಲಿ ಬ್ಯಾಟರ್ಸ್ ಲಕ್ನೋ ತಂಡದ ಬೌಲರ್ಗಳನ್ನ ಕಾಡಿದರು. ಪೊರೆಲ್ ಹಾಗೂ ಸ್ಟಬ್ಸ್ ಅರ್ಧ ಶತಕ ಸಿಡಿಸಿ ಮಿಂಚಿದರು. ಮೊದಲಿಗೆ ಡೆಲ್ಲಿ ತಂಡ 200 ರನ್ಗಳಿಸುವುದು ಅಸಾಧ್ಯ ಎನ್ನುವಂತಾಗಿತ್ತು. ಆದರೆ ಡೆಲ್ಲಿ ಬ್ಯಾಟರ್ಸ್ 10 ಓವರ್ಗಳ ನಂತರ ಅಬ್ಬರಿಸಿದ್ರು. ಲಕ್ನೋ ಇಲ್ಲಿಯವರೆಗೆ 12 ಪಂದ್ಯಗಳನ್ನು ಆಡಿದ್ದಾರೆ. 6 ಪಂದ್ಯ ಗೆದ್ದು, 6 ಸೋಲು ಕಂಡಿದೆ. ಪ್ರಸ್ತುತ ತಂಡವು ಒಟ್ಟು 12 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಡೆಲ್ಲಿ ಮತ್ತು ಲಕ್ನೋ ನಡುವೆ ಇಲ್ಲಿಯವರೆಗೆ ಒಟ್ಟು 4 ಪಂದ್ಯಗಳು ನಡೆದಿವೆ. ಲಕ್ನೋ 3 ಪಂದ್ಯಗಳನ್ನು ಗೆದ್ದಿದ್ದರೆ, ಡೆಲ್ಲಿ ತಂಡ ಕೇವಲ 1 ಪಂದ್ಯವನ್ನು ಗೆದ್ದಿದೆ. ಹೀಗಾಗಿ ಡೆಲ್ಲಿ ವಿರುದ್ಧ ಲಕ್ನೋ ಮೇಲುಗೈ ಸಾಧಿಸಿದೆ.