ಚಾಮರಾಜನಗರ:- ಒಂದು ಕಡೆ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದರೆ, ಮತ್ತೊಂದೆಡೆ ಮಳೆಗಾಗಿ ಮಕ್ಕಳಿಂದ ಬಸವಣ ಪೂಜೆ ಮಾಡಲಾಗಿದೆ.
ನೆನಪಿಡಿ.. ಅಪ್ಪಿತಪ್ಪಿಯೂ ಊಟದ ಬಳಿಕ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ..!
ಮಳೆಗಾಗಿ ಪ್ರಾರ್ಥಿಸಿದ ರಾಮಸಮುದ್ರ ಗ್ರಾಮದ ಪುಟಾಣಿ ಮಕ್ಕಳಿಂದ ಬಸವನ ಮೆರವಣಿಗೆ ನಡೆದಿದೆ. ಗಡಿ ಜಿಲ್ಲೆ ಚಾಮರಾಜನಗರದ ರಾಮಸಮುದ್ರ ಬಡಾವಣೆಯಲ್ಲಿ ಮಂಗಳವಾರ ಸಂಜೆ 4 ಗಂಟೆ ವೇಳೆಯಲ್ಲಿ ಪುಟಾಣಿ ಮಕ್ಕಳಿಂದ ಬಸವಣ ಪೂಜೆಗೈದು ಮಳೆಗಾಗಿ ಪ್ರಾರ್ಥಿಸಿದರು. ಚಾಮರಾಜನಗರ ಜಿಲ್ಲೆಯ ಹಲವೆಡೆ ಮಳೆ ಸುರಿದರೂಕೂಡ ರಾಮಸಮುದ್ರ, ಸುತ್ತಾಮುತ್ತಾ ಮಳೆ ಮಾಯವಾಗಿದ್ದು, ಮಳೆ ಇಲ್ಲದೆ ಬರದಿಂದ ಜನತೆ ತತ್ತರಿಸಿ ಹೋಗಿದ್ದಾರೆ.
ಹೀಗಾಗಿ ಮಳೆಗಾಗಿ ಜನತೆ ಬಸವಣ ಮೊರೆ ಹೋಗಿದ್ದಾರೆ. ಮಳೆಯಾಗದಿದ್ರೆ ಮಕ್ಕಳು ಬಸವನ ಮರದ ಮೂರ್ತಿಗೆ ಪೂಜೆ ಸಲ್ಲಿಸಿ ಮನೆಮನೆಗೆ ತೆರಳಿ ನೀರು ಹಾಕಿಸಿಕೊಂಡರೆ ಮಳೆ ಸುರಿಯುತ್ತೆ ಎಂಬುದು ಹಿರಿಯರ ನಂಬಿಕೆ. ಬಸವನ ಮೂರ್ತಿಗೆ ಅಲಂಕಾರ ಮಾಡಿ ರಾಮಸಮುದ್ರದ ಬಸವೇಶ್ವರ ದೇವಸ್ಥಾನದಲ್ಲಿ ಪುಟಾಣಿ ಮಕ್ಕಳು ಪೂಜೆ ಸಲ್ಲಿಸಿದ್ದಾರೆ. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮಳೆಗಾಗಿ ಪುಟಾಣಿಗಳು ಪ್ರಾರ್ಥಿಸಿದರು. ಇಡೀ ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದ್ರೆ ಗಡಿ ಜಿಲ್ಲೆ ಚಾಮರಾಜನಗರಕ್ಕೆ ಮಾತ್ರ ಮಳೆ ಇಲ್ಲ ಪರಿಣಾಮವಾಗಿ ರಾಮಸಮುದ್ರ ಬಡಾವಣೆಯ ಮಕ್ಕಳು ಇಂದು ಮಳೆಗಾಗಿ ಬಸವಣ ಪೂಜೆಗೈದು ಪ್ರಾರ್ಥಿಸಿದರು.
ಉಯ್ಯೋ ಉಯ್ಯೋ ಮಳೆರಾಯ ಬಸವನ ಕಟ್ಡೆಗೆ ನೀರಿಲ್ಲ …ಉಯ್ಯೋ ಉಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ ಎಂದು ಮಕ್ಕಳು ಬೇಡಿಕೊಂಡಿದ್ದಾರೆ. ಬೇಗ ಮಳೆ ಸುರಿಸುವಂತೆ ಪುಟಾಣಿ ಮಕ್ಕಳಿಂದ ಬಸವಣ್ಣನ ಮೊರೆ ಹೋಗಿದ್ದಾರೆ.