ಬೆಂಗಳೂರು:- ಪ್ರೀತಂ ಗೌಡ ಬೆಂಬಲಿಗರಿಗೆ ಎಸ್ಐಟಿ ಶಾಕ್ ಎದುರಾಗಿದ್ದು, ಹೋಟೆಲ್, ಬಾರ್ಗಳಲ್ಲಿ ಪರಿಶೀಲನೆ ಮಾಡಿದ್ದಾರೆ.
DC Vs RCB ಬಿಗ್ ಫೈಟ್.. ಯಾವ ತಂಡ ಗೆದ್ದರೆ RCB ಗೆ ಪ್ಲಸ್ ಪಾಯಿಂಟ್…!
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಇಂದು ಹಾಸನದಲ್ಲಿ ಜಾಲಾಡಿದ್ದಾರೆ. ಹಾಸನ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರ ವ್ಯವಹಾರ ಸ್ಥಳಗಳ ಮೇಲೆ ಎಸ್ಐಟಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಪ್ರೀತಂ ಗೌಡ ಬೆಂಬಲಿಗ ಕೆಸಿಪಿ ಕಿರಣ್ ಮಾಲೀಕತ್ವದ ಕೃಷ್ಣ ಹೋಟೆಲ್ನಲ್ಲಿ ಎಸ್ಐಟಿ ಪರಿಶೀಲನೆ ನಡೆಸಿತು. ಇನ್ನು ಮತ್ತೊಬ್ಬ ಬೆಂಬಲಿಗ ಶರತ್ ಒಡೆತನದ ಕ್ವಾಲಿಟಿ ಬಾರ್ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಲಾಯ್ತು.
ಇನ್ನು ತನಿಖೆ ತೀವ್ರಗೊಳಿಸಿದ ಎಸ್ಐಟಿ ಅಧಿಕಾರಿಗಳು, ಪ್ರೀತಂಗೌಡ ಅತ್ಯಾಪ್ತ ಕ್ವಾಲಿಟಿ ಬಾರ್ ಓನರ್ ಶರತ್ ಮನೆ ಮೇಲೂ ದಾಳಿ ಮಾಡಿದ್ದಾರೆ. ಬೆಂಗಳೂರಿನಿಂದ ಬಂದಿರುವ ಎಸ್ಐಟಿ ಅಧಿಕಾರಿಗಳು, ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯೊಳಗೆ ಪರಿಶೀಲನೆಗೂ ಮುನ್ನ ಸಂಪೂರ್ಣ ವೀಡಿಯೋ ಚಿತ್ರೀಕರಿಸಿ ಕೊಂಡು, ಒಳ ಪ್ರವೇಶಿಸಿದ್ರು. ಹಾಸನದ ಗೌರಿಕೊಪ್ಪಲಿನಲ್ಲೊರೋ ಶರತ್ ನಿವಾಸದಲ್ಲಿ ಪರಿಶೀಲನೆ ಮುಂದುವರೆದಿದೆ.
ಇನ್ನು ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ ಮನೆ ಮೇಲೂ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೇವರಾಜೇಗೌಡ ಮನೆ, ಕಚೇರಿಯಲ್ಲಿ ಎಸ್ಐಟಿ ಶೋಧ ನಡೆಸಿದ್ದಾರೆ. ಹಾಸನದ ರವೀಂದ್ರ ನಗರದಲ್ಲಿರೋ ದೇವರಾಜೇಗೌಡ ನಿವಾಸ ಸೇರಿದಂತೆ ಒಟ್ಟು ಐದು ಕಡೆ ಎಸ್ಐಟಿ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದ್ದಾರೆ.