ಬಾಗಲಕೋಟೆ :- ಜಿಲ್ಲೆಯ ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದ ಮಹಿಳೆಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿ ಚಿಕಿತ್ಸೆ ಫಲಕಾರಿಯಾಗದೆ ಬಾಗಲಕೋಟೆಯಲ್ಲಿ ಕೊನೆಯುಸಿರು ಎಳೆದಿದ್ದಾಳೆ.
ಗ್ರಾಮದ ಹೊಲವೊಂದರಲ್ಲಿ ಎಂದಿನಂತೆ ತಮ್ಮ ಹೊಲದಲ್ಲಿ ಮಂಗಳವಾರದಂದು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಸಾವಿತ್ರಿ ಗಜಾನನ ಅಜ್ಜನವರಿಗೆ ಹಾವು ಕಚ್ಚಿದ್ದರಿಂದ ಬಾಗಲಕೋಟ ಆಸ್ಪತ್ರೆಗೆ ಸೇರಿಸಲಾಗಿತ್ತು.
ಅಲ್ಲಿ ಜೀವನ್ಮರಣದ ಹೋರಾಟ ಮಾಡಿದ ಯುವತಿ ಮಂಗಳವಾರದಂದು ಮುಂಜಾನೆ ೧೧ ಗಂಟೆಗೆ ಸಾವನ್ನಪ್ಪಿದ್ದಾಳೆ. ಹುನಗುಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಸಂಜೆ ೫ ಗಂಟೆಗೆ ಇದ್ದಲಗಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ವಾಹನ ಸವಾರರ ಗಮನಕ್ಕೆ.. ನಿಮ್ಮ ವಾಹನಗಳಿಗಿನ್ನೂ HSRP ನಂಬರ್ ಪ್ಲೇಟ್ ಅಳವಡಿಸಿಲ್ವಾ..? ದಂಡ ಬೀಳುತ್ತೆ ಹುಷಾರು
ಪರಿಹಾರಕ್ಕೆ ಆಗ್ರಹ ಹಾವು ಕಚ್ಚಿ ಮೃತಪಟ್ಟ ಇದ್ದಲಗಿ ಗ್ರಾಮದ ಮಹಿಳೆ ಸಾವಿತ್ರಿ ಗಜಾನನ ಅಜ್ಜನವರ ಅವರ ಕುಟುಂಬಕ್ಕೆ ಪರಿಹಾರವನ್ನು ಕೂಡಲೇ ಸರಕಾರ ವತಿಯಿಂದ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಕಾರ್ಯಾಧ್ಯಕ್ಷ ಗುರು ಗಾಣಿಗೇರ, ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಬಂಡರಗಲ್ಲ, ಅಧ್ಯಕ್ಷ ಬಸನಗೌಡ ಪೈಲ್, ರಸೂಲಸಾಬ ತಹಸೀಲ್ದಾರ ಆಗ್ರಹಿಸಿದ್ದಾರೆ.