ತಂಡದ ಇಬ್ಬರು ಸ್ಟಾರ್ ಆಟಗಾರರು ಐಪಿಎಲ್ ತೊರೆದು ತವರಿಗೆ ಮರಳಿದ್ದಾರೆ. ಅದರಲ್ಲಿಯೂ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ವಿಲ್ ಜ್ಯಾಕ್ಸ್ ಅನುಪಸ್ಥಿತಿ ಆರ್ಸಿಬಿ ತಂಡಕ್ಕೆ ದೊಡ್ಡ ಹಿನ್ನೆಡೆಯಾಗಲಿದೆ.
Lok Sabha Election: ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ…!
ಅಲ್ಲದೇ ಪ್ಲೇ ಆಫ್ ನಿರ್ಧರಿಸುವ ನಿರ್ಣಾಯಕ ಪಂದ್ಯವನ್ನು ಆರ್ಸಿಬಿ ಇದೇ ಮೇ 18ರಂದು ಚೆನ್ನೈ ವಿರುದ್ಧ ಚಿನ್ನಸ್ವಾಮಿ ಮೈದಾನದಲ್ಲಿ ಆಡಲಿದೆ. ಈ ಪಂದ್ಯಕ್ಕೂ ಮುನ್ನವೇ ಸ್ಟಾರ್ ಆಟಗಾರರು ತಂಡವನ್ನು ಬಿಟ್ಟು ಹೋಗಿರುವುದು ಸಂಕಷ್ಟಕ್ಕೀಡು ಮಾಡಿದೆ. ಮುಂಬರುವ ಟಿ20 ವಿಶ್ವಕಪ್ಗೆ ತಯಾರಿಗಾಗಿ ECB ಇಂಗ್ಲೆಂಡ್ ಆಟಗಾರರಿಗೆ ತವರಿಗೆ ಮರಳುವಂತೆ ಆದೇಶಿಸಿದೆ.
ಆರ್ಸಿಬಿ ಈಗಾಗಲೇ ಟೂರ್ನಿಯಲ್ಲಿ ಅದ್ಭುತ ಕಂಬ್ಯಾಕ್ ಮಾಡಿದ್ದು, ಕಳೆದ 5 ಪಂದ್ಯಗಳನ್ನು ಗೆದ್ದಿದೆ. ಇದರಲ್ಲಿ ವಿಲ್ ಜಾಕ್ಸ್ ಆಟ ಆರ್ಸಿಬಿ ತಂಡಕ್ಕೆ ತುಂಬಾ ದೊಡ್ಡಮಟ್ಟದಲ್ಲಿ ಸಹಾಯಕವಾಗಿತ್ತು. ಆದರೆ ಇದೀಗ ಪ್ಲೇ ಆಫ್ ನಿರ್ಧರಿಸುವ ಪಂದ್ಯದಿಂದಲೇ ಹೊರಗಳಿಯುತ್ತಿರುವುದು ಆರ್ಸಿಬಿಗೆ ದೊಡ್ಡ ಶಾಕ್ ಆಗಿದೆ. ಆದರೆ ಇದೀಗ ಅವರ ಜಾಗಕ್ಕೆ ಯಾವ ಆಟಗಾರ ಆಡಬಹುದು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ತಂಡದಲ್ಲಿ ಕಳೆದ ಕೆಲ ಪಂದ್ಯದಿಂದ ರಿಸ್ಸೆ ಟೋಪ್ಲೆ ಆಡುತ್ತಿಲ್ಲ. ಆದರೆ ವಿಲ್ ಜ್ಯಾಕ್ಸ್ ಮಾತ್ರ ತಂಡದ ಪ್ಲೇಯಿಂಗ್ 11ಗೆ ಎಂಟ್ರಕೊಟ್ಟಾಗಿನಿಂದ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಅವರ ಅನುಪಸ್ಥಿತಿ ಇದೀಗ ತಂಡದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಬಹುದು. ಆದರೆ ಜ್ಯಾಕ್ಸ್ ಬದಲಿಗೆ ಇದೀಗ ಮತ್ತೊಬ್ಬ ಸ್ಟಾರ್ ಆಟಗಾರ ತಂಡದ ಭಾಗವಾಗಲಿದ್ದಾರೆ
ಅದರಂತೆ ವಿಲ್ ಜ್ಯಾಕ್ಸ್ ಬದಲಿಗೆ ಆರ್ಸಿಬಿ ತಂಡ ಮತ್ತೊಬ್ಬ ವಿದೇಶಿ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಿದೆ. ಇದರ ಭಾಗವಾಗಿ ಗ್ಲೇನ್ ಮ್ಯಾಕ್ಸ್ವೆಲ್ ಮತ್ತೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗ್ಲೇನ್ ಮ್ಯಾಕ್ಸ್ವೆಲ್ ಈ ವರ್ಷ ಐಪಿಎಲ್ನಲ್ಲಿ ಉತ್ತಮವಾಗಿ ಆಡಲಿಲ್ಲ. ಇದರಿಂದಾಗಿ ಕಳೆದ ಕೆಲ ಪಂದ್ಯದಿಂದ ಅವರನ್ನು ಹೊರಗಿಡಲಾಗಿತ್ತು. ಈ ವರ್ಷ ಗ್ಲೇನ್ ಮ್ಯಾಕ್ಸ್ವೆಲ್ ಆಡಿರುವ 8 ಪಂದ್ಯದಲ್ಲಿ ಕೇವಲ 36 ರನ್ ಸಿಡಿಸಿದ್ದಾರೆ. ಹೀಗಾಗಿ ಅವರು ಕಳೆದ ಕೆಲ ಪಂದ್ಯದಲ್ಲಿ ಕಳಪೆ ಫಾರ್ಮ್ನಿಂದ ಹೋರಾಡುತ್ತಿದ್ದರು. ಆದರೆ ಇದೀಗ ಅನಿವಾರ್ಯವಾಗಿ ತಂಡದಕ್ಕೆ ಸೇರಿಸಿಕೊಳ್ಳಬೇಕಿದೆ. ಆದರೆ ಮ್ಯಾಕ್ಸ್ವೆಲ್ ಅದ್ಭುತ ಆಟಗಾರನಾಗಿದ್ದು, ಯಾವುದೇ ಕ್ಷಣದಲ್ಲಿಯಾದರೂ ಅಬ್ಬರಿಸುವ ಸಾಧ್ಯತೆ ಇದೆ. ಅಲ್ಲದೇ ಮಹತ್ವದ ಪಂದ್ಯಗಳಲ್ಲಿ ಮ್ಯಾಕ್ಸಿ ಎಂದಿಗೂ ಅಬ್ಬರಿಸುತ್ತಾರೆ. ಇನ್ನು, ಆರ್ಸಿಬಿ ಆಡಿರುವ 13 ಪಂದ್ಯದಲ್ಲಿ 6ರಲ್ಲಿ ಗೆದ್ದು 12 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ. ಹೀಗಾಗಿ ಮೇ 18ರಂದು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಮಾತ್ರ ಆರ್ಸಿಬಿ ಪ್ಲೇಆಫ್ ಆಸೆ ಜೀವಂತವಾಗಲಿದೆ