ಚಾಮರಾಜನಗರ:- ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಸಫಾರಿ ವಲಯದಲ್ಲಿ ಜೋಡಿ ಚಿರತೆಗಳು ಪ್ರತ್ಯಕ್ಷವಾಗುವುದರ ಮೂಲಕ ಪ್ರಾಣಿ ಪ್ರಿಯ ಪ್ರವಾಸಿಗರಲ್ಲಿ ಮಂದಹಾಸ ಮೂಡಿಸಿದೆ. ಆ ಮೂಲಕ ಗೋಪಿನಾಥಂ ಅರಣ್ಯ ವಲಯದಲ್ಲಿ ಚಿರತೆಗಳ ಸಂತತಿ ವೃದ್ದಿಸಿರುವುದಕ್ಕೆ ಸಾಕ್ಷಿಯಾಗಿದೆ.
Lok Sabha Elections 2024: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್ ಶೋ.. ಪ್ರಧಾನಿಗೆ ಅದ್ದೂರಿ ಸ್ವಾಗತ..!
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಗೋಪಿನಾಥಮ್ ನ ಸಫಾರಿ ವಲಯದಲ್ಲಿ ತೆರಳಿದ್ದ ವನ್ಯಪ್ರೀಯರಿಗೆ ಅರಣ್ಯ ಪ್ರದೇಶದ ಬೃಹತ್ ಬಂಡೆಯ ಮೇಲೆ ಎರಡು ಜೋಡಿ ಚಿರತೆಗಳು ಪ್ರತ್ಯಕ್ಷವಾಗಿರುವುದು ಕಂಡು ಬಂದಿದೆ.
ಗೋಪಿನಾಥಂ ಸಫಾರಿ ವಲಯ ಘೋಷಣೆಯಾದ ನಂತರ ಪ್ರಾಣಿಗಳ ಸಂತತಿ ವೃದ್ದಿಯಾಗಿರುವುದು ಕಂಡುಬಂದಿದೆ. ಸಫಾರಿಗೆ ತೆರಳುವ ಪ್ರವಾಸಿಗರು ಹಸಿರು ಪರಿಸರದ ನಡುವೆ ವನ್ಯಜೀವಿಗಳ ಸ್ವಚ್ಚಂದ ಸಂಚಾರ ಕಂಡು ಪುಳಕಿತರಾಗುತ್ತಿದ್ದಾರೆ.
ಸಫಾರಿ ವೇಳೆ ಬಂಡೆ ಮೇಳೆ ಎರಡು ಚಿರತೆಗಳು ಆನಂದವಾಗಿ ವಿಹರಿಸುತ್ತಿರುವ ಚಿತ್ರಿಕರಣ ಮಾಡಿರುವ ಪ್ರವಾಸಿಗರು ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.