ಬೆಂಗಳೂರು:- ದಿನದಿಂದ ದಿನಕ್ಕೆ ಮಹಿಳೆ ಕಿಡ್ನಾಪ್ ಕೇಸ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಎಸ್ ಐಟಿಗೆ ಸಂತ್ರಸ್ತೆ ಸಿಕ್ಕಿದ್ದು ಫಾರ್ಮ್ ಹೌಸ್ ಅಲ್ವಂತೆ..! ಸಂತ್ರಸ್ತೆ ಸಿಕ್ಕಿದ್ದು ಸಂಬಂಧಿಕರ ಮನೆಯಲ್ಲಂತೆ..!?.. ಎಸ್ ಇದರ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ..
ದಿನದಿಂದ ದಿನಕ್ಕೆ ರೇವಣ್ಣ ವಿರುದ್ಧದ ಕಿಡ್ನ್ಯಾಪ್ ಕೇಸ್ ಟ್ವಿಸ್ಟ್ ಪಡೆಯುತ್ತಿದೆ. ನಿನ್ನೆ ಸಂತ್ರಸ್ತ ಮಹಿಳೆಯ ವಿಡಿಯೋ ಒಂದು ವೈರಲ್ ಆಗಿತ್ತು. ಇದೀಗ ಸಂತ್ರಸ್ತ ಮಹಿಳೆಯ ಸಂಬಂಧಿಕ ದಂಪತಿ ವಿಡಿಯೋ ವೈರಲ್ ಆಗಿದೆ. ಸಂತ್ರಸ್ತ ಮಹಿಳೆ ನಮ್ಮ ನೆಂಟರು, ಆ ದಿನ ಅವ್ರು ಒಬ್ರೆ ನಮ್ಮ ಮನೆಗೆ ಬಂದಿದ್ರು. ಆಸ್ಪತ್ರೆಗೆ ಹೋಗಿದ್ದೆ ಅಂತಾ ಮನೆಗೆ ಬಂದು ಸುಮಾರು ಒಂದು ಗಂಟೆ ಇಲ್ಲೆ ಇದ್ರು. ನಮ್ಮ ಮನೆಯವರ ಫೋನ್ ನಿಂದ ಮಗಳಿಗೆ ಫೋನ್ ಮಾಡಿ ಮಾತನಾಡಿದ್ರು. ಅಳಿಯಂದರ ಜೊತೆಗೆ ಪೊಲೀಸ್ರು ಬಂದು ಅವರನ್ನು ಕರೆದುಕೊಂಡು ಹೋದ್ರು ಎಂದ್ರು ಹುಣಸೂರು ಮೂಲದ ದಂಪತಿ ಹೇಳಿಕೆ ನೀಡಿದ್ದಾರೆ. ಸಂತ್ರಸ್ತೆಯ ಸಂಬಂಧಿ ದಂಪತಿ ಹೇಳಿಕೆಯಿಂದ ಎಸ್ಐಟಿ ಮೇಲೆ ಅನುಮಾನ ಮೂಡಿದೆ