ಮುಂಬೈ: ‘ಮಹಾರಾಷ್ಟ್ರ ಮಾದರಿ’ಯಲ್ಲಿ ಕರ್ನಾಟಕದಲ್ಲಿ ಆಪರೇಷನ್ ನಡೆಯುವ ಸುಳಿವನ್ನು ಏಕನಾಥ್ ಶಿಂಧೆ ಕೊಟ್ಟಿದ್ದಾರೆ. ಹೀಗಾಗಿ `ಮಹಾ ಮಾಡೆಲ್’ನಲ್ಲಿ ಆಪರೇಷನ್ ಮಾಡಲು ನಡೆದಿದ್ಯಾ ‘ಆ ಮಹಾ’ ತಯಾರಿ ಎಂಬ ಕುತೂಹಲದ ಪ್ರಶ್ನೆ ಮೂಡಿದೆ. ಮಹಾರಾಷ್ಟ್ರದ ಸತಾರಾದಲ್ಲಿ ಮಾತನಾಡಿದ ಶಿಂಧೆ, ಕರ್ನಾಟಕದಲ್ಲಿ ಸರ್ಕಾರ ಪತನಕ್ಕೆ ತೆರೆಮರೆಯಲ್ಲಿ ಸರ್ಕಸ್ ನಡೆಯುತ್ತಿದೆ ಎಂಬ ಸ್ಫೊಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ನಾನು ಇತ್ತಿಚೇಗೆ ಕರ್ನಾಟಕದ ಒಂದು ಸಭೆಗೆ ತೆರಳಿದ್ದೆ. ಕರ್ನಾಟಕದಲ್ಲಿಯೂ ‘ನಾಥ’ ಆಪರೇಷನ್ ಮಾಡೋದಿದೆ’ ಅಂದಿದ್ದಾರೆ. ‘ನಾಥ ಆಪರೇಷನ್’ ಅಂದ್ರೆ ಏನು..? ಅಂತ ಕೇಳಿದೆ. ಆಗ ಅವರು, ನೀವು ಮಹಾರಾಷ್ಟ್ರದ ಮಹಾಘಟಬಂಧನ ಸರ್ಕಾರ ಪತನ ಮಾಡಿದ್ರಿ. ಹೀಗಾಗಿ ನಿಮ್ಮ ಅನುಭವ ನಮಗೆ ಬಹಳ ಅವಶ್ಯಕವಿದೆ ಎಂದರು. ಖಂಡಿತವಾಗಿಯೂ ನಾನು ಬರುತ್ತೇನೆ ಎಂದು ಹೇಳಿದ್ದೇನೆ ಅಣತಾ ಇಂದು ಶಿಂಧೆ ಹೇಳುವ ಮೂಲಕ ಪರೇಷನ್ ಸುಳಿವು ಕೊಟ್ಟಿದ್ದಾರೆ.
ನೆನಪಿಡಿ.. ಅಪ್ಪಿತಪ್ಪಿಯೂ ಊಟದ ಬಳಿಕ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ..!
ಒಟ್ಟಿನಲ್ಲಿ ಲೋಕಸಭಾ ಚುನಾವಣೆಯ ಬ್ಯುಸಿಯಲ್ಲಿರುವ ನಾಯಕರಿಗೆ ಇದೀಗ ಆಪರೇಷನ್ ಸುಳಿವು ತಲೆಕೆಡಿಸುವಂತೆ ಮಾಡಿದೆ. ಈಗಾಗಲೇ ಸಿದ್ದರಾಮಯ್ಯ ಸರ್ಕಾರ ಪತನದ ಭವಿಷ್ಯ ನುಡಿದಿರುವ ಮೈತ್ರಿ ನಾಯಕರಿಗೆ 136+ ಇರುವ ಕಾಂಗ್ರೆಸ್ ಸರ್ಕಾರ ಕೆಡವೋದು ಅಷ್ಟು ಸುಲಭನಾ..?, ಮಹಾರಾಷ್ಟ್ರ ಸಿಎಂ ಸುಳಿವು ರಾಜಕೀಯ ತಂತ್ರವೋ..? ಅಸಲಿ ಆಟದ ಪ್ರಯತ್ನವೋ ಎಂಬುದನ್ನು ಕಾದುನೋಡಬೇಕಿದೆ.