ಹಿಟ್ಮ್ಯಾನ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯುವ ಸೂಚನೆ ನೀಡಿದ್ದಾರೆ. ಶನಿವಾರ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ತನ್ನ ಮಾಜಿ ಸಹಪಾಠಿ, ಕೆಕೆಆರ್ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಇಬ್ಬರು ಮುಂಬೈ ಇಂಡಿಯನ್ಸ್ ತಂಡದಲ್ಲಿನ ಪ್ರಸ್ತುತ ಸನ್ನಿವೇಶಗಳ ಬಗ್ಗೆ ಮಾತನಾಡಿದ್ದಾರೆ.
ಡಿಕೆಶಿ ಮೇಲೆ ಆರೋಪ ಮಾಡಿ ತಗ್ಲಾಕ್ಕೊಂಡ್ರಾ ದೇವರಾಜೇಗೌಡ!?.. ಹಳೇ ಕೇಸ್ಗಳು ರೀ ಓಪನ್
ಅಭಿಷೇಕ್ ಜೊತೆ ಮಾತನಾಡುತ್ತಾ, ಎಲ್ಲವೂ ಒಂದೊಂದಾಗಿ ಬದಲಾಗುತ್ತಿದೆ. ಏನೇ ಆದರೂ ಅದು ನನ್ನ ಮನೆ. ಆ ಗುಡಿಯನ್ನು ಕಟ್ಟಿದ್ದು ನಾನು. ಈಗ ನಂಗೇನಾಗಬೇಕು? ನನ್ನದು ಇದುವೇ ಲಾಸ್ಟ್ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಅಂದರೆ ಇಲ್ಲಿ ಅಭಿಷೇಕ್ ನಾಯರ್ ಹಾಗೂ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಕುರಿತಾಗಿ ಚರ್ಚಿಸಿದ್ದು, ಈ ವೇಳೆ ನಾನು ಕಟ್ಟಿದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಈಗ ಎಲ್ಲವೂ ಬದಲಾಗುತ್ತಿದೆ. ಈಗ ನಾನೇನು ಮಾಡೋಕಾಗಲ್ಲ. ಮುಂಬೈ ಇಂಡಿಯನ್ಸ್ ಪರ ಇದುವೇ ನನ್ನ ಕೊನೆಯ ಸೀಸನ್ ಎಂದು ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಚ್ಚರಿ ಎಂದರೆ ರೋಹಿತ್ ಶರ್ಮಾ ಹಾಗೂ ಅಭಿಷೇಕ್ ನಾಯರ್ ನಡುವಣ ಈ ಮಾತುಕತೆಯ ವಿಡಿಯೋವನ್ನು ಕೆಕೆಆರ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿತ್ತು. ಆದರೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಅದನ್ನು ಡಿಲೀಟ್ ಮಾಡಿದ್ದಾರೆ.