ಬಳ್ಳಾರಿ:– ಜಿಂದಾಲ್ನ ನೀರಿನ ಹೊಂಡದಲ್ಲಿ ಮೂವರು ಉದ್ಯೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಂದಾಲ್ನ ಆರು ಅಧಿಕಾರಿಗಳ ಮೇಲೆ ತೋರಣಗಲ್ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ.
A1 – ಜಿಂದಾಲ್ನ HSM -03 ಪ್ಲಾಂಟ್ ಉಸ್ತುವಾರಿ ವೈಸ್ ಪ್ರೆಸಿಡೆಂಟ್, A2- HSM-03 ಪ್ಲಾಂಟ್ ಸೇಫ್ಟಿ AVP, A3- HMM-03 ಪ್ಲಾಂಟ್ನ ಸೇಫ್ಟಿ ಮ್ಯಾನೇಜರ್, A4- HSM-03 ಪ್ಲಾಂಟ್ನ ಸಿವಿಲ್ ಡಿಪಾರ್ಟ್ಮೆಂಟ್ ಅಧಿಕಾರಿ, A5- HSM-03 ಪ್ಲಾಂಟ್ ಸೇಫ್ಟಿ ಸೂಪರ್ವೈಸರ್, A6- HSM -03 ಪ್ಲಾಂಟ್ ನ ಮೆಕಾನಿಕಲ್ ಡಿಪಾರ್ಟ್ಮೆಂಟ್ ಅಧಿಕಾರಿಗಳು, ಮೃತ ಜಡಿಯಪ್ಪ ಚಿಕ್ಕಪ್ಪ ಮಹೇಂದ್ರ ಅವ್ರಿಂದ ಬಳ್ಳಾರಿ ಜಿಲ್ಲೆ ತೋರಣಗಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಅಧಿಕಾರಿಗಳ ಹೆಸರು ಬಳಸದೆ FIR ದಾಖಲು ಮಾಡಲಾಗಿದೆ.
ಇನ್ನೂ ಜಿಂದಾಲ್ನ HMS -03 ಪ್ಲಾಂಟ್ನ ನೀರು ಸರಬರಾಜು ಕೊಳವೆಗಳ ರೀಪೇರಿ ವೇಳೆ ಅವಘಡ ಸಂಭವಿಸಿದೆ. ದುರಸ್ತಿ ಕಾರ್ಯ ವೇಳೆ ಕೊಳವೆ ಹರಿದ ನೀರು, ನೀರಿನ ರಭಸಕ್ಕೆ ಹೊಂಡದಲ್ಲಿ ಬಿದ್ದು ಮೂವರು ಜಿಂದಾಲ್ ಉದ್ಯೋಗಿಗಳು ಸಾವನ್ನಪ್ಪಿದರು. ಮೇ 09 ರಂದು ಸಂಜೆ ವೇಳೆ ದುರ್ಘಟನೆ ಸಂಭವಿಸಿದೆ. ಕೊನೆಗೂ ಜಿಂದಾಲ್ನ ಆರು ಅಧಿಕಾರಿಗಳ ಮೇಲೆ FIR ದಾಖಲಾಗಿದೆ.