ಸೀತಾಪುರ:- ತಾಯಿ, ಪತ್ನಿ, ಮಕ್ಕಳನ್ನು ಕೊಂದು ಬಳಿಕ ಗುಂಡು ಹಾರಿಸಿಕೊಂಡು ಉದ್ಯಮಿಯೊಬ್ಬರು ಸೂಸೈಡ್ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ಜರುಗಿದೆ.
45 ವರ್ಷದ ಆರೋಪಿ ಅನುರಾಗ್ ಸಿಂಗ್ ಕುಡಿತದ ಚಟ ಹೊಂದಿದ್ದ. ಈ ಚಟದಿಂದಾಗಿಯೇ ಆತ ಈ ಕೃತ್ಯ ಎಸಗಿರಬಹುದು ಎನ್ನಲಾಗಿದೆ. ಘಟನೆಯಲ್ಲಿ ಮೃತಪಟ್ಟವರನ್ನು ಅನುರಾಗ್ ಸಿಂಗ್ ಅವರ ತಾಯಿ ಸಾವಿತ್ರಿ ದೇವಿ (60), ಅವರ ಪತ್ನಿ ಪ್ರಿಯಾಂಕಾ (40), ಮತ್ತು ಅವರ ಮೂವರು ಪುತ್ರಿಯರಾದ ಅಶ್ವಿನಿ (12), ಅಶ್ವಿ (10), ಮತ್ತು ಮಗ ಅದ್ವೈತ್ (6) ಎಂದು ಗುರುತಿಸಲಾಗಿದೆ.
ಶನಿವಾರ ಮುಂಜಾನೆ ಸೀತಾಪುರದ ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲಾಪುರ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ತನ್ನ ಕುಟುಂಬದ ಸದಸ್ಯರನ್ನು ಕೊಲೆ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.