ಬೆಂಗಳೂರು:- ಮನೆ ಕಾಣಲ್ಲ ಅಂತ ಹೆಮ್ಮರವಾಗಿ ಬೆಳೆದಿದ್ದ ಹುಣಸೆ ಮರಕ್ಕೆ ಕಿಡಿಗೇಡಿಗಳು ವಿಷವಿಟ್ಟ ಘಟನೆ ಜರುಗಿದೆ. ಮರದ ಬುಡ ತೂತು ಮಾಡಿ ಮನೆ ಮಾಲೀಕ ವಿಷವಿಟ್ಟಿದ್ದಾನೆ. ಆಸಿಡ್ ಇಂಜೆಕ್ಷನ್ ನೀಡಿ ಮರಗಳ ಮಾರಣ ಹೋಮಕ್ಕೆ ಸಂಚು ನಡೆಸಿದ್ದು, ಕೆಲವರು ನಿವೇಶನ, ಮನೆಗಳಿಗೆ ತೊಂದರೆ ಎಂದು ಮರಗಳಿಗೆ ಕೊಳ್ಳಿ ಇಡಲಾಗಿದೆ. ಇತ್ತೀಚೆಗಷ್ಟೆ ಮಲ್ಲೇಶ್ವರಂನಲ್ಲಿ ಘಟನೆ ನಡೆದಿತ್ತು. ಈ ಬಗ್ಗೆ ವೃಕ್ಷ ವೈದ್ಯ ವಿಜಯ್ ನಿಶಾಂತ್ ಬೇಸರ ಹೊರ ಹಾಕಿದರು.
ಕುಡಿಯೋಕೆ ನೀರಿಲ್ಲ, ಉತ್ತಮ ಊಟವಿಲ್ಲ.. ಅವ್ಯವಸ್ಥೆಗಳ ಆಗರವಾದ ಬೆಂಗಳೂರು ವಿವಿ ಲೇಡಿಸ್ ಹಾಸ್ಟೆಲ್!
ದಯವಿಟ್ಟು ಯಾರೂ ಈರೀತಿ ಮಾಡಬೇಡಿ ಎಂದು ಮನವಿ ಮಾಡಿದರು. ನಗರದಲ್ಲಿ 40° ಬಿಸಿಲು ದಾಖಲಾಗ್ತಿದೆ. ಮರಗಳು ತುಂಬಾ ಅವಶ್ಯಕತೆ ಇದೆ. ಮನೆ ಕಾಣಲ್ಲ ಎಂದು ಮರಗಳಿಗೆ ವಿಷ ಹಾಕೋದು ಕಾನೂನು ಬಾಹೀರ. ಮರಕ್ಕೆ ಮಾರಕ ಕೆಲಸ ಮಾಡಿದ್ರೆ ನಿಮ್ಮ ಮೇಲೆ ಕೇಸ್ ಕೂಡ ದಾಖಲಾಗುತ್ತೆ ಎಂದು ವೃಕ್ಷ ವೈದ್ಯ ವಿಜಯ್ ನಿಶಾಂತ್ ಎಚ್ಚರಿಕೆ ನೀಡಿದ್ದಾರೆ.