ಹಾಸನ:- ಮಹಿಳೆ ಮೇಲಿನ ಅತ್ಯಾಚಾರ ಕೇಸ್ ಗೆ ಸಂಬಂಧಿಸಿದಂತೆ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಯಿತು.
Gold price: ಕಳೆದ ಹತ್ತು ದಿನದಲ್ಲಿ ಚಿನ್ನದ ಬೆಲೆ ದುಪ್ಪಟ್ಟು.. ಇಲ್ಲಿದೆ ಇವತ್ತಿನ ದರ ಪಟ್ಟಿ!
ಹೊಳೆನರಸೀಪುರದ ಜಡ್ಜ್ ನಿವಾಸದಲ್ಲಿ ಹಾಜರುಪಡಿಸಲಾಗಿತ್ತು. ಅತ್ಯಾಚಾರ ಕೇಸ್ ದಾಖಲಾಗ್ತಿದ್ದಂತೆ ದೇವರಾಜೇಗೌಡ ಲಾಕ್ ಆಗಿದ್ದಾನೆ.
ನಿನ್ನೆ ಸಂಜೆ ಮತ್ತೆರೆಡು ಆಡಿಯೋ ರಿಲೀಸ್ ಮಾಡಿದ್ದ ದೇವರಾಜೇಗೌಡ, ವಿಡಿಯೋ ಕೂಡಾ ಹರಿ ಬಿಟ್ಟಿದ್ದರು. ಇದಾದ ಎಂಟೇ ನಿಮಿಷದಲ್ಲಿ ಮೊಬೈಲ್ ಲೋಕೇಶನ್ ಆಧಾರದಲ್ಲಿ ದೇವರಾಜೇಗೌಡನನ್ನ ನಿನ್ನೆ ರಾತ್ರಿ ಲಾಕ್ ಮಾಡಲಾಗಿತ್ತು. ಇವತ್ತು ಹೊಳೆನರಸೀಪುರದಲ್ಲಿ ತೀವ್ರ ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಗಿದೆ. ಆದರೆ ಆರೋಪ ತಳ್ಳಿಹಾಕಿರುವ ದೇವರಾಜೇಗೌಡ ಸತ್ಯಕ್ಕೆ ಜಯ ಸಿಗುತ್ತೆ ಎಂದಿದ್ದರು.
ದೇವರಾಜೇಗೌಡ ವಿಚಾರಣೆಯೇ ಪೊಲೀಸರಿಗೆ ಸವಾಲ್ ಆಗಿದ್ದು, ಪೊಲೀಸರಿಗೆ ಮರುಪ್ರಶ್ನೆ ಹಾಕಿದ್ದಾರೆ. ಸಂತ್ರಸ್ತೆ ಮಾಡಿರುವ ಆರೋಪವನ್ನೇ ಮುಂದಿಟ್ಟು ಪ್ರಶ್ನೆ ಕೇಳ್ತಿದ್ರೂ, ಇದೊಂದು ವ್ಯವಸ್ಥಿತ ಹನಿಟ್ರ್ಯಾಪ್ ಅಂತಾ ವಾದಿಸಿದ್ದಾರಂತೆ. ಬೆಂಗಳೂರಿನಲ್ಲಿ ನಾನು ದೂರು ಕೊಟ್ಟ ಬಳಿಕ ನನ್ನ ಮೇಲೆ ಕೇಸ್ ಹಾಕಿದ್ದೀರಾ ಅಂತಾ ಪ್ರಶ್ನಿಸಿದ್ದಾರಂತೆ.
ಸದ್ಯ ದೇವರಾಜೇಗೌಡ ವಿಚಾರಣೆ ಮುಗಿಸಿ ಪೊಲೀಸರು, ವೈದ್ಯಕೀಯ ಚಿಕಿತ್ಸೆಗೊಳಪಡಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ದೇವರಾಜೇಗೌಡರನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.