ಬೆಂಗಳೂರು:- ನಗರದಲ್ಲಿ ಅಕ್ರಮವಾಗಿ ಹೋರ್ಡಿಂಗ್ಸ್, ಫ್ಲೆಕ್ಸ್, ಬ್ಯಾನರ್ ಹಾಕಿದರೇ, ಆ ಸ್ಥಳ ಮತ್ತು ಜಾಹಿರಾತು ಫೋಟೋ ತೆಗೆದು ನಮಗೆ ಕಳುಹಿಸಿ ಎಂದು ಬಿಬಿಎಂಪಿ 94806 85700 ವಾಟ್ಸಪ್ ಸಂಖ್ಯೆ ನೀಡಿದೆ.
Accident: ಕಾರು ಬೈಕ್ ನಡುವೆ ಬೀಕರ ರಸ್ತೆ ಅಪಘಾತ.. ಸವಾರ ಸ್ಥಳದಲ್ಲೇ ಸಾವು!
ಅನಧಿಕೃತವಾಗಿ ಬ್ಯಾನರ್ಗಳನ್ನು ಹಾಕಿ ಸಾರ್ವಜನಿಕ ಸೌಂದರ್ಯಕ್ಕೆ ದಕ್ಕೆ ತರುವುದು ಬಿಬಿಎಂಪಿ ಕಾಯ್ದೆಯ ಉಲ್ಲಂಘನೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಇಂತಹ ಅನಧಿಕೃತ ಪೋಸ್ಟರ್ ಅಥವಾ ಬ್ಯಾನರ್ಗಳನ್ನು ಹಾಕಿದರೆ ಎಫ್ಐಆರ್ ದಾಖಲಿಸಲಾಗುತ್ತದೆ. ಅಕ್ರಮ ಬ್ಯಾನರ್ಗಳ ಬಗ್ಗೆ ದೂರುಗಳನ್ನು ನೀಡಲು ಬಿಬಿಎಂಪಿಯ 94806 85700 ಸಂಖ್ಯೆಗೆ ವಾಟ್ಸಾಪ್ ಮಾಡಬಹುದು ಎಂದಿದೆ
ನಿಷೇಧದ ನಡುವೆಯೂ ನಗರದ ಬನಶಂಕರಿ ಎರಡನೇ ಹಂತದಲ್ಲಿ ಅಕ್ರಮವಾಗಿ ಬ್ಯಾನರ್ ಹಾಕಿದ ಕಾಂಗ್ರೆಸ್ ಮುಖಂಡರ ವಿರುದ್ಧ ಎಫ್ಐಆರ್ ದಾಖಲಾಗಿದೆ. “ಯಾವುದೇ ಪ್ರಾಧಿಕಾರದ ಅನುಮತಿ ಪಡೆಯದೇ ಕಾಂಗ್ರೆಸ್ ಮುಖಂಡ ಕಾರ್ತಿಕ್ ವೆಂಕಟೇಶ ಮೂರ್ತಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಕೋರಿ ಬನಶಂಕರಿ ಎರಡನೇ ಹಂತ ದೇವೇಗೌಡ ಪೆಟ್ರೋಲ್ ಬಂಕ್ ವೃತ್ತ, ಎಂಕೆ ಪಟ್ಟಲಿಂಗಯ್ಯ ರಸ್ತೆಯ ವಿವಿಧ ಕಡೆಗಳಲ್ಲಿ ಬ್ಯಾನರ್ ಹಾಕಲಾಗಿದೆ. ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.