ಬೆಂಗಳೂರು:- ಒಂಟಿ ಮಹಿಳೆಯರೇ ಈ ಸುದ್ದಿ ಮಿಸ್ ಮಾಡ್ದೆ ನೋಡಿ.. ಒಂಟಿಯಾಗಿ ವಾಸಿಸುವವರಿಗೆ ಬೆಂಗಳೂರು ಸೇಫ್ ಆ ಎಂಬ ಪ್ರಶ್ನೆ ಉದ್ಭವಿಸಿದೆ. ಎಸ್ ಸರಕ್ಕಾಗಿ ಒಂಟಿ ಮಹಿಳೆಯನ್ನೇ ಕೊಲೆ ಮಾಡಲಾಗಿದೆ.
ಒಂಟಿ ಮಹಿಳೆಯ ಕುತ್ತಿಗೆ ಹಿಸುಕಿ ಕೊಲೆಗೈದು ಚಿನ್ನದ ಸರ ಕಳವು ಮಾಡಿರುವಂತಹ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ ನಡೆದಿದೆ. ದಿವ್ಯಾ (36) ಮೃತ ಮಹಿಳೆ. ಗಂಡ ಗುರುಮೂರ್ತಿ ಸಲೂನ್ ಕೆಲಸಕ್ಕೆ ಹೋಗಿದ್ದಾರೆ. ಈ ವೇಳೆ ದಿವ್ಯಾ ಮನೆಯಲ್ಲಿ ಒಂಟಿಯಾಗಿದ್ದರು. ಈ ವೇಳೆ ಆರೋಪಿ ಮಹಿಳೆ ಕೊಲೆಗೈದು ಕುತ್ತಿಯಲ್ಲಿದ್ದ ಚೈನ್ ಕಳವು ಮಾಡಿದ್ದಾನೆ. ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮಹಿಳೆಯ ಮೃತದೇಹವನ್ನು ಆರ್ಆರ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಪೊಲೀಸರು ಗಂಡನನ್ನು ವಿಚಾರಿಸಿದ್ದು ತಾನು ಸಲೂನ್ಗೆ ಹೋಗಿದ್ದಾಗ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ