ಬೆಂಗಳೂರು:- ಇಂದು ಅಕ್ಷಯ ತೃತೀಯ ಹಿನ್ನೆಲೆ ಬಸವನಗುಡಿಯಲ್ಲಿರುವ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನಲ್ಲಿ ಹಬ್ಬದ ವಾತಾವರಣವೇ ಕಳೆಗಟ್ಟಿದೆ.
ಅಕ್ಷಯ ತೃತೀಯದ ಪ್ರಯುಕ್ತ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನಲ್ಲಿ ಅಯೋಧ್ಯೆಯಲ್ಲಿ ಪೂಜಿಸಲ್ಪಟ್ಟ ಬಾಲ ರಾಮನ ವಿಗ್ರಹದ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅದರಂತೆ ಶ್ರೀ ಬಾಲ ರಾಮರ ಬೆಳ್ಳಿ ವಿಗ್ರಹಕ್ಕೆ ಪೂಜೆ ಸಲ್ಲಿಸಿ ನಮಿಸಲಾಯಿತು.
ಈ ಪೂಜಾ ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯರು ಹಾಗೂ ಸಾಯಿ ಗೋಲ್ಡ್ ಪ್ಯಾಲೇಸ್ ನ ಮಾಲೀಕರಾದ ಟಿ ಎ ಶರವಣ ಅವರೊಂದಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನ ರಾಯಭಾರಿ ಯಾದ ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಅವರು ಮತ್ತು ಕನ್ನಡ ಕಿರುತೆರೆ ನಟಿ ಪೂರ್ಣಿಮಾ ಅವರು ಭಾಗಿಯಾಗಿದ್ದರು.
ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ 50,000 ಮೇಲ್ಪಟ್ಟು ಖರೀದಿಸಿದ ಗ್ರಾಹಕರಿಗೆ ಅಯೋಧ್ಯೆಯ ಶ್ರೀ ಬಾಲ ರಾಮರ ಸನ್ನಿಧಾನದಲ್ಲಿ ಪೂಜಿಸಲ್ಪಟ್ಟ ಬೆಳ್ಳಿ ವಿಗ್ರಹವನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ. ಅಕ್ಷಯ ತೃತೀಯದಂದು ಬೆಳಗ್ಗೆ 7 ರಿಂದ ಸಂಜೆ 11 ಗಂಟೆಯವರೆಗೂ ಎಲ್ಲಾ ಶಾಖೆಗಳು ತೆರೆದಿರುತ್ತದೆ ಎನ್ನಲಾಗಿದೆ.