ಬೆಂಗಳೂರು/ಹಾಸನ:- ಪ್ರಜ್ವಲ್ ರೇವಣ್ಣ ಮೇಲೆ ಮತ್ತೊಂದು ಅತ್ಯಾಚಾರ ಕೇಸ್ ದಾಖಲಾಗಿದ್ದು, ಇತ್ತ ಕಠಿಣ ಸೆಕ್ಷನ್ಗಳ ಅಡಿ ಎಫ್ಐಆರ್ ದಾಖಲಾಗಿದೆ.
ಪೆನ್ ಡ್ರೈವ್ ಕೇಸ್: ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟ ಪ್ರಜ್ವಲ್ ಅರೆಸ್ಟ್..!
ಇದಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಗನ್ನಿಕಡ ತೋಟದ ಮನೆಯಲ್ಲಿ ಸ್ಪಾಟ್ ಮಹಜರ್ ನಡೆದಿದೆ. ನಿನ್ನೆ ಎಸಿಪಿ, ಇನ್ಸ್ಪೆಕ್ಟರ್, ಪಿಎಸ್ಐ ಸಮ್ಮುಖದಲ್ಲಿ ಸಂತ್ರಸ್ಥೆಯ ಸ್ಥಳ ಮಹಜರು ನಡೆದಿದೆ. ಸಂತ್ರಸ್ಥೆ ಗನ್ನಿಕಡದಲ್ಲಿ ಕೆಲಸ ಮಾಡೋ ವೇಳೆ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರ ನಡುವೆ ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಕಾನೂನು ಕಂಟಕ ಎದುರಾಗಿದೆ. ಮೂರನೇ ಎಫ್ಐಆರ್ನಲ್ಲಿ ಒಂದಕ್ಕಿಂತ ಒಂದು ಕಠಿಣ ಸೆಕ್ಷನ್ಗಳನ್ನು ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೇ 8ರಂದು ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಮೂರನೇ ಎಫ್ಐಆರ್ನಲ್ಲಿ ಹಲವು ಸೆಕ್ಷನ್ ಹಾಕಲಾಗಿದೆ