ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್ಗಾಗಿ ಹುಡುಕಾಟ ಆರಂಭವಾಗಿದೆ ಎಂದು ವರದಿ ಹೇಳಿದೆ. BCCI ಶೀಘ್ರದಲ್ಲೇ ಇದಕ್ಕೆ ಅಗತ್ಯವಾದ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು ಎಂದು ಹೇಳಿದೆ. ಟೀಮ್ನ ಪ್ರಸ್ತುತ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಭಾರತೀಯ ಮಂಡಳಿಗೆ ಯಾವುದೇ ಅಸಮಾದಾನವಿಲ್ಲ ಎನ್ನಲಾಗಿದೆ.
ತೃತೀಯ ಲಿಂಗಿ ಹತ್ಯೆ ಕೇಸ್: ಓರ್ವ ಮಹಿಳೆ ಅರೆಸ್ಟ್… ಕೊಲೆಗೆ ಕಾರಣ ಇಲ್ಲಿದೆ..!
ರಾಹುಲ್ ದ್ರಾವಿಡ್ ಅವರಿಗೂ ಮುಂದಿನ ಅವಧಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಪ್ರಸ್ತುತ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ಅವರ ಅಧಿಕಾರಾವಧಿ ಜೂನ್ನಲ್ಲಿ ಕೊನೆಗೊಳ್ಳಲಿದೆ. ಹಿರಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ 2021ರಲ್ಲಿ ಮೊದಲ ಬಾರಿಗೆ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆ ಆಗಿದ್ದರು. ರವಿಶಾಸ್ತ್ರಿ ಬದಲಿಗೆ ಅವರಿಗೆ ಈ ಜವಾಬ್ದಾರಿ ನೀಡಲಾಗಿತ್ತು. ರಾಹುಲ್ ದ್ರಾವಿಡ್ ಅವರ ಮೊದಲ ಅಧಿಕಾರಾವಧಿ ಎರಡು ವರ್ಷಗಳು ಎಂದು ಹೇಳಲಾಗಿತ್ತು. 2023ರಲ್ಲಿ ಇದನ್ನು T20 ವಿಶ್ವಕಪ್ 2024ರ ವರೆಗೆ ವಿಸ್ತರಿಸಲಾಯಿತು. ಟಿ20 ವಿಶ್ವಕಪ್ ನಂತರವೂ ರಾಹುಲ್ ದ್ರಾವಿಡ್ ಕೋಚ್ ಆಗಿ ಉಳಿಯಲು ಬಯಸಿದರೆ, ಅವರು ಮತ್ತೆ ಅರ್ಜಿ ಸಲ್ಲಿಸಬಹುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈಗಾಗಲೇ ಹೇಳಿದ್ದಾರೆ ಎಂದು ವರದಿಯಾಗಿದೆ.
ಮುಂದಿನ ದಿನಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಿದ್ದೇವೆ ಎಂದು ಜಯ್ ಶಾ ತಿಳಿಸಿದ್ದಾರೆ. ನಾವು ದೀರ್ಘಾವಧಿಗೆ ಕೋಚ್ ಅನ್ನು ಆಯ್ಕೆ ಮಾಡಲು ಬಯಸುತ್ತೇವೆ. ಹೀಗಾಗಿ ಹೊಸ ಕೋಚ್ ನೇಮಕ ಮೂರು ವರ್ಷಗಳ ಕಾಲ ನಡೆಯಲಿದೆ. ಭಾರತೀಯ ಕ್ರಿಕೆಟ್ನಲ್ಲಿ ವಿವಿಧ ಸ್ವರೂಪಗಳಿಗೆ ಪ್ರತ್ಯೇಕ ಕೋಚ್ಗಳನ್ನು ಹೊಂದುವ ಸಂಪ್ರದಾಯವಿಲ್ಲ. ಜೂನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಆಯ್ಕೆ ಆಗಿದೆ. ತಂಡವು ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಆಡುತ್ತಿರುವಾಗ, ಸಿಎಸಿ ಹೊಸ ಕೋಚ್ ಅನ್ನು ಆಯ್ಕೆ ಮಾಡುತ್ತದೆ ಎನ್ನಲಾಗಿದೆ. ಆದರೆ ಇಲ್ಲಿ ಪ್ರಮುಖವಾಗಿ ನೋಡುವುದಾದರೆ, ರಾಹುಲ್ ದ್ರಾವಿಡ್ ಕಳೆದ ಏಕದಿನ ವಿಶ್ವಕಪ್ ಫೈನಲ್ಗೆ ತಂಡ ತಲುಪಿತ್ತು. ಹೀಗಾಗಿ ರಾಹುಲ್ ದ್ರಾವಿಡ್ ಅವರ ಅಧಿಕಾರವದಿ ಮುಗಿದ ಬಳಿಕ ಮತ್ತೆ ಅವರನ್ನೇ ಮುಂದುವರೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ