ಗದಗ: ಅಕ್ಷಯ ತೃತೀಯ ಹಿನ್ನೆಲೆ ಗದಗನಲ್ಲಿ ಜನ್ರು ಚಿನ್ನ ಖರೀದಿಯಲ್ಲಿ ತೊಡಗಿದ್ದಾರೆ.
ಗದಗ ನಗರದ ಸರಾಫ್ ಬಜಾರ್ ನಲ್ಲಿ ಜನವೋ ಜನ ತುಂಬಿದ್ದು, ಚಿನ್ನದ ಅಂಗಡಿಗಳು ಫುಲ್ ರಶ್ ಆಗಿವೆ. ಕಳೆದ ವರ್ಷಕ್ಕಿಂತ ಈ ಬಾರಿ ಚಿನ್ನದ ಬೆಲೆ ಗಗನಕ್ಕೇರಿದ್ರೂ ಕೂಡಾ ಚಿನ್ನ ಪ್ರೀಯರು ಮಾತ್ರ ಚಿನ್ನ ಖರೀದಿಯಲ್ಲಿ ತೊಡಗಿದರೋ ದೃಶ್ಯಗಳು ಸಾಮಾನ್ಯವಾಗಿವೆ.
ಅಕ್ಷಯ ತೃತೀಯ ಚಿನ್ನ ಖರೀದಿಗೆ ಪ್ರಾಶಸ್ತ್ಯವಾದ ದಿನವಾಗಿದ್ದು ಮಹಿಳೆಯರು ವಿವಿಧ ಚಿನ್ನಾಭರಣ ಖರೀದಿಸಿ ಸಂತಸ ಪಡ್ತಿದ್ದಾರೆ. ತಮಗಿಷ್ಟವಾದ ಆಭರಣಗಳನ್ನು ಸೆಲೆಕ್ಟ್ ಮಾಡಿ ಕೊಂಡುಕೊಂಡ್ರು.
ನಾವು ಪ್ರತಿವರ್ಷ ಚಿನ್ನ ಖರೀದಿ ಮಾಡ್ತೇವೆ ಅದೇ ರೀತಿ ಈ ವರ್ಷವೂ ಕೂಡಾ ಚಿನ್ನ ಖರೀದಿಸಿದ್ದು ಸಂತಸವಾಗಿದೆ, ಈ ದಿನ ಚಿನ್ನ ಖರೀದಿಸಿದ್ರೆ ಒಳ್ಳೇದಾಗತ್ತೆ ಮುಂದೆಯೂ ಕೂಡಾ ಹೆಚ್ಚೆಚ್ಚು ಚಿನ್ನ ಖರೀದಿಸಬಹುದಾದ ಪ್ರಾಶಸ್ತ್ಯ ದಿನವಾಗಿದೆ ಹಾಗಾಗಿ ಈ ದಿನ ಚಿನ್ನ ಖರೀದಿಗೆ ಒಳ್ಳೇದು ಅಂದ್ರು.