ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಅನುಮಾನಸ್ಪದವಾಗಿ ಯುವಕನ ಶವ ಪತ್ತೆಯಾಗಿರುವ ಘಟನೆ S R ನಗರ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
Breaking News: ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು 7 ವರ್ಷದ ಬಾಲಕಿ ಸಾವು!
ಮಿಷನ್ ರೋಡ್ ನ ಪಿ.ಸಿ.ಮೋಹನ್ ಅಂಡ್ ಕೊ ಕಾಂಪ್ಲೆಕ್ಸ್ ನ ಗ್ರೌಂಡ್ ಫ್ಲೋರ್ ನಲ್ಲಿ ಶವ ಪತ್ತೆಯಾಗಿದೆ. ಮೃತ ಯುವಕ ಕೆ.ಎಸ್ ಗಾರ್ಡನ್ ನಿವಾಸಿ ಸತ್ಯ ಎನ್ನಲಾಗಿದೆ. ಮೃತ ವ್ಯಕ್ತಿ ಸತ್ಯ ಪ್ಲಂಬರ್ ಕೆಲಸ ಮಾಡಿಕೊಂಡಿದ್ದ. ನಿನ್ನೆ ರಾತ್ರಿ ಫ್ರೆಂಡ್ಸ್ ಜೊತೆ ಮನೆಯಿಂದ ಹೊರಗಡೆ ಹೋಗಿದ್ದ. ಇಂದು ಬೆಳಗ್ಗೆ ಸ್ಥಳೀಯರು ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ಸತ್ಯ ಕಿವಿಯಿಂದ ರಕ್ತ ಬಂದಿರುವುದು ಪತ್ತೆ ಆಗಿದ್ದು, ಸ್ಥಳಕ್ಕೆ SR ನಗರ ಪೊಲೀಸರ ಭೇಟಿ, ಪರಿಶೀಲನೆ ಮಾಡಿದ್ದಾರೆ. ಮಗನ ಮೃತದೇಹ ನೋಡಿ ಮೂರ್ಚೆ ಬಂದು ತಾಯಿಯು ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.