ನೆಲಮಂಗಲ: ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು 7 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲೂಕಿನ ವಾಜರಹಳ್ಳಿಯಲ್ಲಿ ಜರುಗಿದೆ.
ಯಲ್ಲಮ್ಮ 7 ಮೃತ ಬಾಲಕಿ ಎನ್ನಲಾಗಿದೆ. ನೆನ್ನೆ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಗೇಟ್ ಕಟ್ ಆಗಿ ಘಟನೆ ಸಂಭವಿಸಿದೆ. ರಾಯಚೂರು ಜಿಲ್ಲೆಯ ದೇವದುರ್ಗದ ತಂದೆ ಮುಕ್ಕಣ್ಣ ತಾಯಿ ಬಾಲಮ್ಮನ ಮಗಳು ಸಾವನ್ನಪ್ಪಿದ್ದಾರೆ. ಇವರು ಗಾರೆ ಕೆಲಸ ಮಾಡಿ ಜೀವನ ನಡೆಸುತಿದ್ದರು ಎನ್ನಲಾಗಿದ್ದು, ಘಟನೆ ಸಂಬಂದ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.