ಈ ಸೀಸನ್ ನಲ್ಲಿ ನೀವು ಮಾವಿನಕಾಯಿ ಚಟ್ನಿ ತಿಂದಿದ್ದೀರಾ? ತಿಂದಿಲ್ಲ ಅಂದರೆ ಈ ಸೂಪರ್ ರೆಸಿಪಿಯನ್ನು ನೀವು ಟ್ರೈ ಮಾಡಬೇಕು. ಮಾಡುತ್ತಿರುವಾಗಲೇ ಬಾಯಲ್ಲಿ ನೀರೂರಿಸುವಂತ ಚಟ್ನಿ.
Mandya: SSLC ಪರೀಕ್ಷೆಯಲ್ಲಿ ಫೇಲ್.. ಇಬ್ಬರು ವಿದ್ಯಾರ್ಥಿಗಳು ಸೂಸೈಡ್!
ಬಿಸಿಬಿಸಿ ಅನ್ನದ ಜೊತೆ ಮಾವಿನಕಾಯಿ ಚಟ್ನಿ ಬೆರೆಸಿ ತಿನ್ನುತ್ತಿದ್ದರೆ ಕಳೆದೋಗುತ್ತೇವೆ. ಬಾಯಿಗೆ ರುಚಿ ಕೊಡುವಂತಹ ಮಾವಿನಕಾಯಿ ಚಟ್ನಿ ಚಿಕ್ಕವರಿಂದ ದೊಡ್ಡವರವರೆಗೂ ಇಷ್ಟವಾಗುತ್ತದೆ. ಅನ್ನ ಅಷ್ಟೇ ಅಲ್ಲ, ಬಿಸಿಬಿಸಿ ಚಪಾತಿ, ಪೂರಿ, ಪರೋಟಾ, ಮುದ್ದೆ ಎಲ್ಲದಕ್ಕೂ ಹೇಳಿ ಮಾಡಿಸಿದ ಚಟ್ನಿ. ಒಮ್ಮೆ ನೀವು ಮನೆಯಲ್ಲಿ ಟ್ರೈ ಮಾಡಿದರೆ ಮಾವಿನಕಾಯಿ ಸೀಸನ್ ಮುಗಿಯುವವರೆಗೂ ತಪ್ಪದೇ ಮಾಡುತ್ತಿರುತ್ತೀರ. ಮಾವಿನಕಾಯಿ-ಕೊಬ್ಬರಿ ಚಟ್ನಿ ಮಾಡುವುದು ಹೇಗೆಂದು ನೋಡೋಣ.
ಹುಳಿ ಮಾವಿನಕಾಯಿ: ಅರ್ಧ
ತೆಂಗಿನತುರಿ: 1 ಕಪ್
ಕಡಲೇಬೀಜ: 2 ಟೀ ಸ್ಪೂನ್
ಹಸಿಮೆಣಸಿನಕಾಯಿ: 6
ಜೀರಿಗೆ: 1 ಟೀ ಸ್ಪೂನ್
ಬೆಳ್ಳುಳ್ಳಿ ಎಸಳು: 6-7
ಕೊತ್ತಂಬರಿಸೊಪ್ಪು: ಸ್ವಲ್ಪ
ಕರಿಬೇವು: ಸ್ವಲ್ಪ
ಉಪ್ಪು: ರುಚಿಗೆ ತಕ್ಕಷ್ಟು
ಎಣ್ಣೆ: 1 ಟೀ ಸ್ಪೂನ್
ಸಾಸಿವೆ: 1 ಟೀ ಸ್ಪೂನ್
ಕಡಲೇಬೇಳೆ – 1 ಟೀ ಸ್ಪೂನ್
ಉದ್ದಿನಬೇಳೆ – 1 ಟೀ ಸ್ಪೂನ್
ಒಣಮೆಣಸಿನಕಾಯಿ – 2
ಇಂಗು: ಚಿಟಿಕೆ
ಶುಂಠಿ ತುರಿ: ಕಾಲು ಟೀ ಸ್ಪೂನ್
ಮೊದಲಿಗೆ ಅರ್ಧ ಹುಳಿ ಮಾವಿನಕಾಯಿಯನ್ನು ಸಣ್ಣದಾಗಿ ಕಟ್ ಮಾಡಿಟ್ಟುಕೊಳ್ಳಬೇಕು. ಸ್ಟೌವ್ ಮೇಲೆ ಒಂದು ಬಾಣಲಿ ಇಟ್ಟು ಇದಕ್ಕೆ 2 ಟೀ ಸ್ಪೂನ್ ಕಡಲೇಬೀಜ ಹಾಕಿ ಫ್ರೈ ಮಾಡಬೇಕು. ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು. ಇದರ ಜೊತೆಗೆ 6 ಹಸಿಮೆಣಸಿನಕಾಯಿ, ಅರ್ಧ ಟೀ ಸ್ಪೂನ್ ಜೀರಿಗೆ, 6-7 ಬೆಳ್ಳುಳ್ಳಿ ಎಸಳು, ರುಚಿಗೆ ತಕ್ಕಷ್ಟು ಕಲ್ಲು ಉಪ್ಪು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಇದೇ ಮಿಶ್ರಣಕ್ಕೆ 1 ಕಪ್ ತೆಂಗಿನತುರಿ, ಕೊತ್ತಂಬರಿಸೊಪ್ಪು ಸ್ವಲ್ಪ, ಸ್ವಲ್ಪ ನೀರನ್ನು ಹಾಕಿ ಮತ್ತೆ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಕೊನೆಯದಾಗಿ ಹಚ್ಚಿಟ್ಟಿರುವ ಹುಳಿಮಾವಿನಕಾಯಿ ಪೀಸ್ ಗಳನ್ನು ಹಾಕಿ ಚಟ್ನಿ ಹದಕ್ಕೆ ರುಬ್ಬಿಕೊಳ್ಳಬೇಕು.
ಸ್ಟೌವ್ ಮೇಲೆ ಒಗ್ಗರಣೆಗೆ ಚಿಕ್ಕ ಬಾಣಲಿ ಇಟ್ಟು, ಇದಕ್ಕೆ 1 ಟೀ ಸ್ಪೂನ್ ಎಣ್ಣೆ ಹಾಕಿಕೊಂಡು ಕಾಯಿಸಿಕೊಳ್ಳಬೇಕು. ಎಣ್ಣೆ ಕಾದ ಬಳಿಕ 1 ಟೀ ಸ್ಪೂನ್ ಸಾಸಿವೆ, 1 ಟೀ ಸ್ಪೂನ್ ಕಡಲೇಬೇಳೆ, 1 ಟೀ ಸ್ಪೂನ್ ಉದ್ದಿನಬೇಳೆ, 2 ಒಣಮೆಣಸಿನಕಾಯಿ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಅರ್ಧ ಟೀ ಸ್ಪೂನ್ ಜೀರಿಗೆ, ಚಿಟಿಕೆ ಇಂಗು, ಸಣ್ಣಗೆ ತುರಿದ ಶುಂಠಿ ಕಾಲು ಟೀ ಸ್ಪೂನ್ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಕೊನೆಯದಾಗಿ ಸ್ವಲ್ಪ ಕರಿಬೇವು, ಅರ್ಧ ಟೀ ಸ್ಪೂನ್ ಅರಿಶಿಣಪುಡಿ ಹಾಕಿ ಮಿಕ್ಸ್ ಮಾಡಿ ಸ್ಟೌವ್ ಆಫ್ ಮಾಡಿಕೊಳ್ಳಬೇಕು
ಒಗ್ಗರಣೆಯನ್ನು ಮಾವಿನಕಾಯಿ-ಕೊಬ್ಬರಿ ಚಟ್ನಿಗೆ ಹಾಕಿ ಮಿಕ್ಸ್ ಮಾಡಬೇಕು. ಈ ರೀತಿ ಮಾಡಿದರೆ ಬಿಸಿಬಿಸಿ ಅನ್ನಕ್ಕೆ ಸೂಪರ್ ಟೇಸ್ಟ್ ಕೊಡುವಂತಹ ಮಾವಿನಕಾಯಿ-ಕೊಬ್ಬರಿ ಚಟ್ನಿ ರೆಡಿಯಾಗುತ್ತದೆ.