ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ʼಡ್ರೈವ್ ಪಾಲಿಟಿಕ್ಸ್ ತಾರಕಕ್ಕೇರಿದೆ.. ಪೆನ್ ಡ್ರೈವರ್ ರೂವಾರಿ ಡಿ.ಕೆ ಶಿವಕಮಾರ್ ಅಂತಾ ಮಾಜಿ ಸಿಎಂ ಬಾಂಬ್ ಹಾಕಿದ್ದೇ, ಡಿ.ಕೆ ಶಿವಕುಮಾರ್ ರೊಚ್ಚಿಗೆದ್ದಿದ್ದಾರೆ.. ಕುಮಾರಸ್ವಾಮಿ ಕಿಂಗ್ ಆಫ್ ಬ್ಲ್ಯಾಕ್ ಮೇಲರ್ ಅಂತಾ ಡಿಕೆ ಗುಡುಗಿದ್ದಾರೆ.. ಯೆಸ್… ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್ ವಿಚಾರದಲ್ಲಿ ಮೂರೂ ಪಕ್ಷದ ನಾಯಕರು ಪರಸ್ಪರ ಕೆಸರೆರಚಾಡುತ್ತಿದ್ದಾರೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನಡುವೆ ಅಂತೂ ಕದನವೇ ಶುರುವಾಗಿಬಿಟ್ಟಿದೆ.
ಪೆನ್ ಡ್ರೈವ್ ವಿಡಿಯೋ ಲೀಕ್ ಮಾಡಿದವರ ವಿರುದ್ಧ ಕ್ರಮ ಯಾಕೆ ಜರುಗಿಸಿಲ್ಲ ಅಂತಾ ಹೆಚ್ ಡಿಕೆ ಆಕ್ರೋಶ ಹೊರಹಾಕಿದ್ದಾರೆ.. ನವೀನ್ ಗೌಡ, ಕಾರ್ತಿಕ್, ಶ್ರೇಯಸ್ ಗೆ ಇನ್ನೂ ನೋಟಿಸ್ ಕೊಟ್ಟಿಲ್ಲ.. ದೇವರಾಜೇಗೌಡ ಜೊತೆ ಯಾಕಪ್ಪ ಮಾತಾನಾಡಿದೆ ನೀನು..? 5 ಸಂತ್ರಸ್ತೆ ಮಹಿಳೆಯರನ್ನ ಇಟ್ಟುಕೊಂಡಿದ್ದೀನಿ ಅಂತ ಹೇಳಿದ್ದೀಯ ನೀನು. ನಿನಗೇನಿತ್ತು ಅಂತಾ ಕೆಲಸ ಡಿಕೆ ಎಂದು ಹೆಚ್ ಡಿ ಕುಮಾರಸ್ವಾಮಿ ಆಕ್ರೋಶಭರಿತವಾಗಿ ಮಾತನಾಡಿದ್ರು..
Pomegranate Juice: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ಜ್ಯೂಸ್ ಕುಡಿದರೆ ಈ ರೋಗಗಳು ಓಡಿ ಹೋಗುತ್ತೆ!
ಇನ್ನು ಹೆಚ್ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಕೌಂಟರ್ ಕೊಟ್ರು. ಹೆಚ್ ಡಿ ಕುಮಾರಸ್ವಾಮಿ ಕಿಂಗ್ ಆಫ್ ಬ್ಲ್ಯಾಕ್ ಮೇಲರ್.. ನನ್ನ ರಾಜೀನಾಮೆ ಬೇಕಂತೆ.. ಆಯ್ತು ರಾಜೀನಾಮೆ ಕೊಡೋಣ ಅಂತಾ ವ್ಯಂಗ್ಯ ಮಾಡಿದ್ರು.. ಅಲ್ಲದೇ ಕುಮಾರಸ್ವಾಮಿ ಎಲ್ಲಾ ಅಧಿಕಾರಿಗಳನ್ನ ಹೆದರಿಸುತ್ತಿದ್ದಾರೆ.
ಕುಮಾರಸ್ವಾಮಿ ಏನು ಲಾಯರ್, ಜಡ್ಜ್ ತೀರ್ಪು ಕೊಡೋಕೆ.. ಕೋರ್ಟ್ನಲ್ಲಿ ಹೋಗಿ ವಾದ ಮಾಡಲಿ ಅಂತಾ ಡಿಸಿಎಂ ಡಿಕೆ ಶಿವಕುಮಾರ್,ಚಿಕ್ಕಮಗಳೂರಿನಲ್ಲಿ ತಿರುಗೇಟು ಕೊಟ್ರು. ಒಟ್ನಲ್ಲಿ ಒಕ್ಕಲಿಗ ನಾಯಕತ್ವಕ್ಕಾಗಿ ಈ ಪೆನ್ ಡ್ರೈವ್ ಬಿಡುಗಡೆ ಆಯ್ತು ಅಂತಾ ಹೇಳಲಾಗ್ತಿದೆ.. ಇದು ಒಕ್ಕಲಿಗ ನಾಯಕರಲ್ಲೇ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ.. ಈ ಪೆನ್ ಡ್ರೈವ್ ಪಾಲಿಟಿಕ್ಸ್ ಎಲ್ಲೋಗಿ ನಿಲ್ಲುತ್ತೋ ನೋಡಬೇಕು.