ಬೆಂಗಳೂರು:– ಇದುವರೆಗೂ ಪ್ರಜ್ವಲ್ ಎಲ್ಲಿದ್ದಾರೆ ಎಂಬುವುದು ಗೊತ್ತಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಪ್ರಜ್ವಲ್ ಪೆನ್ ಡ್ರೈವ್ ಲೀಕ್ ಕೇಸ್: ದೇವರಾಜೇಗೌಡ ವಿರುದ್ಧ ರಾಜ್ಯ ವಕೀಲ ಪರಿಷತ್ತಿಗೆ ದೂರು!
ಈ ಸಂಬಂಧ ಮಾತನಾಡಿದ ಅವರು, ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರು ಪ್ರಮುಖ ಆರೋಪಿ, ಅವರು ದೇಶ ಬಿಟ್ಟು ಹೋಗಿದ್ದಾರೆ. ಹಾಸನ ಜಿಲ್ಲೆಯ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಎಸ್ಐಟಿ ಗಂಭಿರವಾಗಿ ಪರಿಗಣಿಸಿದೆ. ಅವರನ್ನ ವಾಪಸ್ ಕರೆತರಲು ಸಿಬಿಐಗೆ ಬ್ಲೂ ಕಾರ್ನರ್ ನೋಟಿಸ್ ನೀಡಬೇಕೆಂದು ಎಸ್ಐಟಿಯವರು ಮನವಿ ಮಾಡಿದ್ರು. ಅಂತೆಯೇ ಸಿಬಿಐ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. 197 ದೇಶಗಳಲ್ಲಿ ಇಂಟರ್ ಪೋಲ್ ನಿಂದ ಬ್ಲೂ ಕಾರ್ನರ್ ನೋಟಿಸ್ ಹೋಗಿದೆ ಎಂದು ತಿಳಿಸಿದರು.
ಕಾರ್ತಿಕ್ ಗೌಡ ಇಲ್ಲಿಯೇ ಇದ್ದಾರೆ. ಅವರು ಹೇಳಿಕೆ ಕೊಟ್ಟಿದ್ದಾರೆ. ಅವರ ಬಂಧನದ ಬಗ್ಗೆ ಎಸ್ ಐಟಿ ತೀರ್ಮಾನ ಮಾಡುತ್ತೆ. ಇನ್ನು ಪ್ರಜ್ವಲ್ ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ಜರ್ಮನಿಗೆ ಹೋಗಿರೋದಷ್ಟೇ ಗೊತ್ತು. ದುಬೈಗೆ ಹೋಗಿದ್ದಾರೆ ಅದೆಲ್ಲ ಗೊತ್ತಿಲ್ಲ, ಇನ್ನೂ ನಿಖರವಾಗಿ ಎಲ್ಲಿದ್ದಾರೆ ಗೊತ್ತಿಲ್ಲ ಎಂದು ಹೇಳಿದ್ರು.