ಬೆಂಗಳೂರು:- ಸ್ವರಕ್ಷಣೆಗೆ ಪೆಪ್ಪರ್ ಸ್ಪ್ರೇ ಬಳಸಬಹುದೇ!? ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯಪಟ್ಟಿದೆ.
ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ನೀಡಿದ ಅಭಿಪ್ರಾಯ ಇದಕ್ಕೆ ವ್ಯತಿರಿಕ್ತವಾಗಿದ್ದು, ಪೆಪ್ಪರ್ ಸ್ಪ್ರೇ ಅನ್ನೋದು ಅಪಾಯಕಾರಿ ಅಸ್ತ್ರವಾಗಿದ್ದು ಅದನ್ನ ಬಳಸುವುದಕ್ಕೆ ಯಾವುದೇ ಕಾನೂನು ರೂಪಿಸಲಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಮೆರಿಕದಂತಹ ದೇಶದಲ್ಲಿ ಪೆಪ್ಪರ್ ಸ್ಪ್ರೇ ಬಳಕೆಯನ್ನು ಹಾನಿಕಾರಕ ರಾಸಾಯನಿಕ ಸಿಂಪಡಣೆ ಎಂದೇ ಪರಿಗಣಿಸಲಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಸಿ.ಕೃಷ್ಣಯ್ಯ ಚೆಟ್ಟಿ ಆಂಡ್ ಸನ್ಸ್ ಕಂಪನಿಯ ಚಿನ್ನಾಭರಣಗಳ ಮಳಿಗೆಯ ನಿರ್ದೇಶಕ ಸಿ.ಗಣೇಶ್ ನಾರಾಯಣ ಮತ್ತು ಅವರ ಪತ್ನಿ ವಿದ್ಯಾ ನಟರಾಜ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಂಶದ ಮೇಲೆ ಗಮನ ಸೆಳೆದಿದೆ ಎಂದು ವರದಿ ಮಾಡಿದೆ. ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆ ರದ್ದುಗೊಳಿಸಬೇಕು ಸಿ.ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಕಂಪನಿಯ ನಿರ್ದೇಶಕ ಹಾಗೂ ಅವರ ಪತ್ನಿ ಅರ್ಜಿ ಸಲ್ಲಿಸಿದ್ದರು.
ವೈಯಕ್ತಿಕ ರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ಎಂದು ಅರ್ಜಿದಾರರು ಹೇಳಿದ್ದಾರೆ. ಆದರೆ, ಇಂತಹ ಹೇಳಿಕೆಯು ಸಾಕ್ಷ್ಯ ಅಧಿನಿಯಮದ ಅನುಸಾರ ತನಿಖೆಗೆ ಒಳಪಟ್ಟು ಸತ್ಯ ಹೊರಬರಬೇಕಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣವೊಂದರ ಸಂಬಂಧ ತಡೆಯಾಜ್ಞೆ ಮೂಲಕ ಸೀಲ್ ಮಾಡಲು ಬಂದ ವೇಳೆ ಬಂದಂತಹ ನೌಕರರ ಮೇಲೆ ಪೆಪ್ಪರ್ ಸ್ಪ್ರೇ ಎರಚಿದ್ದರು. ಇದರ ವಿರುದ್ಧ ಪೆಪ್ಪರ್ ಸ್ಪ್ರೇ ದಾಳಿಗೆ ಒಳಗಾದ ಸಿಬ್ಬಂದಿ ದೂರು ನೀಡಿದ್ದರು. ಘಟನೆ ಸಮಯದಲ್ಲಿ ವೈಯಕ್ತಿಕ ರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ದಾಳಿ ನಡೆಸಿದ್ದಾಗಿ ಸಿ.ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಕಂಪನಿಯ ನಿರ್ದೇಶಕ ಹಾಗೂ ಅವರ ಪತ್ನಿ ಸಮರ್ಥಿಸಿಕೊಂಡಿದ್ದರು. ಹೀಗಾಗಿ ಹೈಕೋರ್ಟ್ನಲ್ಲಿ ತಮ್ಮ ವಿರುದ್ಧದ ಪ್ರಕರಣ ವಜಾ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.