ಹುಬ್ಬಳ್ಳಿ : ಒಂದೇ ಕುಟುಂಬ 69 ಸದಸ್ಯರು ಮತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮತಗಟ್ಟೆ ಸಂಖ್ಯೆ 56,57 ರಲ್ಲಿ ನೂಲ್ವಿ ಗ್ರಾಮದ ಕಂಟೆಪ್ಪ ತೋಟದ ಕುಟುಂಬದ ಸದಸ್ಯ ತಮ್ಮ ಹಕ್ಕು ಚಲಾಯಿಸಿದ್ದಾರೆ.
Hair Care: ಕೂದಲು ದಟ್ಟವಾಗಿರಲು ವಾರಕ್ಕೆ ಎಷ್ಟು ಬಾರಿ ಎಣ್ಣೆ ಹಚ್ಚಬೇಕು ಗೊತ್ತಾ?
ಪ್ರತಿ ಚುನಾವಣೆಯಲ್ಲಿ ಮೂರು ತಂಡವಾಗಿ ವಾಹನ ಮೂಲಕ ಬಂದು ಮತ ಚಲಾವಣೆ ಮಾಡುತ್ತಿದ್ದರು. ಆದ್ರೆ ಈ ಚುನಾವಣೆಯಲ್ಲಿ ಏಕಕಾಲದಲ್ಲಿ ಬಂದು ಮತದಾನ ಮಾಡಿದ್ದಾರೆ. ಮೂರು ತಲೆಮಾರಿನ ಕುಟುಂಬದ ಸದಸ್ಯರು ಮತದಾನದಲ್ಲಿ ಭಾಗಿಯಾಗಿರುವುದು ವಿಶೇಷ. ಇನ್ನು ಮತ ಚಲಾಯಿಸಿದ ಬಳಿಕ ಎಲ್ಲರೂ ಸೇರಿ ಸೆಲ್ಫಿ ಪಡೆದು ಸಂಭ್ರಮಿಸಿದರು.