ಹಾವೇರಿ:-2024 ರ ಲೋಕಸಭಾ ಚುನಾವಣೆ ಪ್ರಯುಕ್ತ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಶಾಸಕ ಶ್ರೀನಿವಾಸ ಮಾನೆ ಮತದಾನ ಮಾಡಿದ್ದಾರೆ. ಕುಟುಂಬ ಸದಸ್ಯರ ಜೊತೆಗೆ ಬಂದು ಮಾನೆ ಮತದಾನ ಮಾಡಿದ್ದಾರೆ.
ಬಳಿಕ ಮಾತನಾಡಿದ ಮಾನೆ,, ಹಾವೇರಿ, ಧಾರವಾಡ ಸೇರಿದಂತೆ 20 ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಮತದಾನ ಮಾಡುವುದು ಮೂಲಭೂತ ಹಕ್ಕು ಎಲ್ಲರು ಮತ ಚಲಾಯಿಸಬೇಕು ಎಂದು ಶ್ರೀನಿವಾಸ ಮಾನೆ ಹೇಳಿದ್ದಾರೆ.
ಇನ್ನೂ ಮತ್ತೊಂದೆಡೆ ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಮಾಜಿಸಚಿವ ಬಿಸಿ ಪಾಟೀಲ ಮತದಾನ ಮಾಡಿದ್ದಾರೆ. ಬಾಳಂಬೀಡ ಗ್ರಾಮದ ಮತಗಟ್ಟೆಯಲ್ಲಿ ಮತದಾನ ನಡೆದಿದೆ. ಮತಗಟ್ಟೆ ಸಂಖ್ಯೆ 98 ರಲ್ಲಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ.
ಹಾವೇರಿ ಬೆಳಿಗ್ಗೆ 11ಗಂಟೆಯ ವರೆಗಿನ ಮತದಾನದ ಮಾಹಿತಿ:
ಬ್ಯಾಡಗಿ – 26.06
ಗದಗ- 24.73
ಹಾನಗಲ-24.74
ಹಾವೇರಿ – 24.31
ಹಿರೇಕೆರೂರ – 24.62
ರಾಣೇಬೆನ್ನೂರ-25.70
ರೋಣ -22.02
ಶಿರಹಟ್ಟಿ – 22.01
ಪ್ರತಿಶತ :24.24