ಸೂರ್ಯಾಕುಮಾರ ಯಾದವ್ ಅವರ ಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈಗೆ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದರ ಭಾಗವಾಗಿ ನಿನ್ನೆ ಮುಂಬೈ ಬೌಲರ್ ಗಳು ಉತ್ತಮ ದಾಳಿ ನಡೆಸಿದರು. ಅಂತಿಮವಾಗಿ ಹೈದರಾಬಾದ್ ತಂಡವು ನಿಗದಿತ 20 ಓವರ್ಗೆ 8 ವಿಕೆಟ್ ನಷ್ಟಕ್ಕೆ 173 ರನ್ ಸಿಡಿಸಿದರು. ಬಳಿಕ ಈ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು 17.2 ಓವರ್ಗೆ 3 ವಿಕೆಟ್ ಕಳೆದುಕೊಂಡು 174 ರನ್ ಗಳಿಸುವ ಮೂಲಕ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಅಲ್ಲದೇ ಈ ವೇಳೆ ಸೂರ್ಯಕುಮಾರ್ ಯಾದವ್ ಹೈದರಾಬಾದ್ ವಿರುದ್ಧ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದರು.
Lokasabha Election: ಇಂದು ಕರ್ನಾಟಕದ 14 ಕ್ಷೇತ್ರ ಸೇರಿ 93 ಸ್ಥಾನಗಳಲ್ಲಿ ಮತದಾನ..!
ಇನ್ನು, ಹೈದರಾಬಾದ್ ನೀಡಿದ 174 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕರಾಗಿ ಕಣಕ್ಕಿಳಿದ ಇಶಾನ್ ಕಿಶನ್ 9 ರನ್ ಹಾಗೂ ರೋಹಿತ್ ಶರ್ಮಾ 4 ರನ್ ಸಿಡಿಸಿ ಔಟ್ ಆದರು. ನಮನ್ ದೀರ್ ಸಹ ಶೂನ್ಯಕ್ಕೆ ಮರಳಿದರು. ಆದರೆ ಸೂರ್ಯಕುಮಾರ್ ಯಾದವ್ಗೆ ತಿಲಕ್ ವರ್ಮಾ ಉತ್ತಮ ಸಾಥ್ ನೀಡಿದರು. ಈ ವೇಳೆ ತಿಲಕ್ 32 ಎಸೆತದಲ್ಲಿ 37 ರನ್ ಸಿಡಿಸಿದರು. ಆದರೆ ಇದೇ ವೇಳೆ ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್ ತಂಡ ಪ್ರಕಟವಾದ ನಂತರ ಮೊದಲ ಭಾರತೀಯ ಆಟಗಾರನೊಬ್ಬ ಟಿ20 ಮಾದರಿಯಲ್ಲಿ ಶತಕ ಸಿಡಿಸಿದ್ದಾರೆ. ಹೌದು ಸೂರ್ಯಕುಮಾರ್ ಕೇವಲ 51 ಎಸೆತದಲ್ಲಿ 12 ಫೋರ್ ಮತ್ತು 6 ಸಿಕ್ಸ್ ಮೂಲಕ 102 ರನ್ ಸಿಡಿಸಿ ಅಬ್ಬರಿಸಿದರು