ಗದಗ:- ನಾಳೆ 2024 ರ ಲೋಕಸಭಾ ಚುನಾವಣೆ ಮತದಾನ ಹಿನ್ನೆಲೆ ಬೆಳಿಗ್ಗೆಯಿಂದಲೇ ಗದಗ ಜಿಲ್ಲೆಯಲ್ಲಿ ಮಸ್ಟರಿಂಗ್ ಕಾರ್ಯ ಆರಂಭವಾಗಿದೆ. ಶಿರಹಟ್ಟಿಯ ಎಫ್ ಎಂ ಡಬಾಲಿ ಪಿಯು ಕಾಲೇಜ, ಗದಗನ ಗುರುಬಸವ ಸಿಬಿಎಸ್ ಸಿ ಶಾಲೆ, ರೋಣದ ಡಿ ಪೌಲ್ ಅಕಾಡೆಮಿ,ನರಗುಂದದ ಸರ್ಕಾರಿ ಇಂಜನಿಯರಿಂಗ್ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದೆ.
ಒಟ್ಟು ಗದಗ ಜಿಲ್ಲೆಯಲ್ಲಿ 961 ಮತಗಟ್ಟೆಗಳು ಇದ್ದು,
444185 ಪುರುಷ ಮತದಾರರು, 446522 ಮಹಿಳಾ ಮತದಾರರು, 61 ಇತರೆ ಸೇರಿ ಒಟ್ಟು 890768 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1058 ಪಿ ಆರ್ ಓ, 1058 ಎ ಪಿ ಆರ್ ಓ, 1630 ಪಿಓ, ಸೇರಿ ಒಟ್ಟು 3260 ಮತದಾನ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.
ನಾಳೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಘಂಟೆ ವರೆಗೆ ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ಒಟ್ಟು 189 ರೂಟ್ ಗಳನ್ನು ಗುರುತಿಸಲಾಗಿದ್ದು KSRTC ಬಸ್ ಗಳು, ಜೀಪ್ ಗಳು, ಮಿನಿ ಬಸ್ ಬಳಕೆ ಮಾಡಲಾಗುತ್ತದೆ. ಆಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಸಕಲ ಸಿಧ್ಧತೆ ಕೈಗೊಳ್ಳಲಾಗಿದೆ. ಮತಯಂತ್ರಗಳನ್ನು ಹೊತ್ತು ಮತಗಟ್ಟೆಗಳತ್ತ ತೆರಳಲು ಅಧಿಕಾರಿಗಳು ತಯಾರಿ ನಡೆಸಿದ್ದು, ಭದ್ರತೆಗಾಗಿ ಕೇರಳ ಸ್ಟೇಟ್ ಆರ್ಮಡ್ ರಿಸರ್ವ ಫೋರ್ಸ ಸಿಬ್ಬಂದಿ, ಪೊಲೀಸ್, ಹೋಮ್ ಗಾರ್ಡ್ಸ ನಿಯೋಜನೆ ಮಾಡಲಾಗಿದೆ.