ಬೆಂಗಳೂರು:- ನಮ್ಮ ಗಮನಕ್ಕೆ ತರದೆ ಮಹಜರು ನಡೆಸಲಾಗುತ್ತಿದೆ ಎಂದು ರೇವಣ್ಣ ಪರ ವಕೀಲ ಆರೋಪ ಮಾಡಿದ್ದಾರೆ
Kumaraswamy: ಇಂದಿನಿಂದ ಆಂಬ್ಯುಲೆನ್ಸ್ ಸೇವೆ ಬಂದ್: ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ HDK..!
ಅಧಿಕಾರಿಗಳು ಮಹಜರು ಪ್ರಕ್ರಿಯೆ ನೋಟಿಸ್ ನನಗೆ ಕೊಟ್ಟಿದ್ದಾರೆ, ಭವಾನಿ ರೇವಣ್ಣ ಅವರಿಗೆ ಮಂಡಿ ಆಪರೇಷನ್ ಆಗಿರುವ ಹಿನ್ನೆಲೆ, ಮಹಜರು ಪ್ರಕ್ರಿಯೆ ನೋಡಿಕೊಳ್ಳಲು ನನಗೆ ಹೇಳಿದ್ದರು ಎಂದರು
ಹೊಳೆನರಸೀಪುರದ ಮನೆಯಲ್ಲಿ ಮಹಜರು ಪ್ರಕ್ರಿಯೆ ವೇಳೆ ನಾನಿದ್ದೆ, ಬಸವನಗುಡಿ ಮನೆಯಲ್ಲೂ ಮಹಜರು ಮಾಡುತ್ತೇವೆ ಎಂದು ಎಸ್ಐಟಿ ಅಧಿಕಾರಿಗಳು ನನಗೆ ನೋಟಿಸ್ ನೀಡಿದ್ದರು.
ಹಾಗಾಗಿ ಮಹಜರು ಪ್ರಕ್ರಿಯೆಗೆ ಸಹಕರಿಸಲು ನಾನು ಬಂದಿದ್ದೆ, ಆದರೆ ಹೆಚ್.ಡಿ.ರೇವಣ್ಣ ನಿವಾಸದೊಳಗೆ ನಮ್ಮನ್ನು ಬಿಟ್ಟಿಲ್ಲ ಎಂದು ಗೋಪಾಲ್ ಹೇಳಿದ್ದಾರೆ. ಬಸವನಗುಡಿ ನಿವಾಸದ ಬಳಿ ರೇವಣ್ಣ ಪರ ವಕೀಲರು ಹೇಳಿಕೆ ನೀಡಿದ್ದಾರೆ.
ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಹೆಚ್ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ