ಹಾವೇರಿ:- ನಾಳೆ ಕರ್ನಾಟಕದಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಮತದಾನ ಹಿನ್ನೆಲೆ, ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ಮತದಾನ ಹಿನ್ನೆಲೆ, ಇಂದು ಮಸ್ಟರಿಂಗ್ ಕಾರ್ಯ ನಡೆದಿದೆ. ಕ್ಷೇತ್ರದಲ್ಲಿ 1982 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. 9,02,119 ಪುರುಷ, 8,90,572 ಮಹಿಳೆಯರು, 83 ಇತರೆ, ಒಟ್ಟು 17,92,774 ಮತದಾರರು ಇದ್ದು, ಬಂದೊಬಸ್ತ್ ಗೆ 4054 ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಹಾವೇರಿ, ಬ್ಯಾಡಗಿ, ಹಾನಗಲ್, ಹಿರೇಕೆರೂರ, ರಾಣೇಬೆನ್ನೂರು, ಶಿರಹಟ್ಟಿ, ರೋಣ, ಗದಗ ವಿಧಾನಸಭಾ ಕ್ಚೇತ್ರಗಳನ್ನೊಳಗೊಂಡಿರುವ ಕ್ಷೇತ್ರ ಆಗಿದೆ. ಮತದಾರರನ್ನ ಸೆಳೆಯಲು ಅಭ್ಯರ್ಥಿಗಳು ಕೊನೆಯ ಹಂತದ ಪ್ರಯತ್ನ ಮಾಡುತ್ತಿದೆ. ಇಂದು ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಕೈ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಬಿಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಡುವೆ ಸ್ಪರ್ಧೆ ಏರ್ಪಟ್ಟಿದೆ.