ಬೆಂಗಳೂರು:- ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಹಂತದ ಚುನಾವಣೆ ಮುಗಿಯೋವರೆಗೂ ಪ್ರಜ್ವಲ್ ದೇಶಕ್ಕೆ ಮರಳೋದು ಡೌಟು ಎನ್ನಲಾಗಿದೆ.
ತಂದೆ ಬಂಧನವಾದ್ರೂ ವಿದೇಶದಲ್ಲಿ ಪ್ರಜ್ವಲ್ ರೇವಣ್ಣ ಅಡಗಿ ಕುಳಿತಿದ್ದಾರೆ. ನಿನ್ನೆ ಪ್ರಜ್ವಲ್ ರೇವಣ್ಣ ಭಾರತಕ್ಕೆ ಆಗಮಿಸುವ ನಿರೀಕ್ಷೆ ಹಿನ್ನೆಲೆ, ಏರ್ ಪೋರ್ಟ್ ನಲ್ಲಿ SIT ಅಧಿಕಾರಿಗಳು ಕಾದುಕುಳಿತಿದ್ದರು. ಆದರೆ ಇಂದೂ ಕೂಡ ಪ್ರಜ್ವಲ್ ಭಾರತಕ್ಕೆ ಬರೋದು ಅನುಮಾನ ಎನ್ನಲಾಗಿದೆ. ನಾಳೆ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲಿದೆ. ಚುನಾವಣೆ ಮುನ್ನ ಅರೆಸ್ಟ್ ಆದ್ರೆ ಮತಗಳ ಮೇಲೆ ಪ್ರಭಾವ ಬೀರೋ ಸಾಧ್ಯತೆ ಇದೆ ಇದೆ. ಹೀಗಾಗಿ ನಾಳೆ ಚುನಾವಣೆ ಮುಗಿದ ನಂತರ ಇಲ್ಲ ತಂದೆ ಪೊಲೀಸ್ ಕಸ್ಟಡಿ ಮುಗಿದ ಮೇಲೆ ಕೋರ್ಟ್ ಆದೇಶದ ನೋಡಿಕೊಂಡು ಪ್ರಜ್ವಲ್ ಮರಳೋ ಸಾಧ್ಯತೆ ಇದೆ ಎನ್ನಲಾಗಿದೆ.
ಬಸವನಗುಡಿ ನಿವಾಸದಲ್ಲಿ ಸ್ಥಳ ಮಹಜರು ಪ್ರಕ್ರಿಯೆ ಆರಂಭಿಸಿದ SIT ಅಧಿಕಾರಿಗಳು, ರೇವಣ್ಣ ನಿವಾಸದ ಒಳಗೆ ಪೊಲೀಸರು ಪ್ರಿಂಟರ್ ತೆಗೆದುಕೊಂಡ ಹೋಗಿದ್ದಾರೆ. ಸ್ಥಳ ಮಹಜರು ವೇಳೆ ಸಂತೃಸ್ತೆಯ ಹೇಳಿಕೆ ದಾಖಲಿಸಲು ಪ್ರಿಂಟರ್ ಬಳಕೆ ಮಾಡಲಾಗುತ್ತದೆ