ಆರ್ಸಿಬಿ ಮತ್ತು ಗುಜರಾತ್ ಪಂದ್ಯ ಬೆಂಗಳೂರಿನಲ್ಲಿಯೇ ನಡೆಯಲಿರುವ ಕಾರಣ ಮಳೆ ಏನಾದರೂ ಅಧಿಕ ಪ್ರಮಾಣದಲ್ಲಿ ಸುರಿದರೆ ಪಂದ್ಯಕ್ಕೆ ಅಡ್ಡಿಯಾಗಲಿದೆ.
ನಾಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳು ಸೆಣಸಾಡಲಿದೆ. ಈ ಪಂದ್ಯವು ಮೇ 4ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯ ಉಭಯ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದ್ದು, ಪ್ಲೇಆಫ್ ಲೆಕ್ಕಾಚಾರ ಸಹ ಇದರ ಮೇಲೆ ನಿಂತಿದ. ಶನಿವಾರ ನಡೆಯಲಿರುವ ಡಬಲ್ ಹೆಡ್ಡರ್ ಪಂದ್ಯದಲ್ಲಿ ಸಂಜೆ 7:30ಕ್ಕೆ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ಮತ್ತು ಗುಜರಾತ್ ತಂಡಗಳು ಮುಖಾಮುಖಿ ಆಗಲಿದ್ದು, ಹೈವೋಲ್ಟೇಜ್ ಪಂದ್ಯಕ್ಕಾಗಿ ಉಭಯ ತಂಡಗಳ ಅಬೀಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಪಂದ್ಯದ ಗೆಲುವು ಗುಜರಾತ್ ರೀತಿಯೇ ಆರ್ಸಿಬಿ ಪ್ಲೇಆಫ್ಗಾಗಿ ಅತ್ಯಂತ ಮಹತ್ವದ್ದಾಗಿದೆ.
ಇನ್ನು, ಗುಜರಾತ್ ಟೈಟಾನ್ಸ್ ನಾಲ್ಕು ಗೆಲುವು ಮತ್ತು ಆರು ಸೋಲುಗಳೊಂದಿಗೆ 10 ಪಂದ್ಯಗಳಲ್ಲಿ ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. RCB ತಂಡ ಸಹ ಆಡಿರುವ 10 ಪಂದ್ಯದಲ್ಲಿ 3 ಪಂದ್ಯ ಗೆದ್ದು 7 ಪಂದ್ಯ ಸೋತು 6 ಅಂಕಗಳಿಂದ 10ನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇಆಫ್ ಗೆ ಲಗ್ಗೆಯಿಡಲು ಇದು ಇಬ್ಬರಿಗೂ ಮಹತ್ವದ್ದಾಗಿದೆ.
ಆದರೆ ಈ ಮಹತ್ವದ ಪಂದ್ಯ ನಡೆಯುವುದೇ ಅನುಮಾನ ಎನ್ನಲಾಗುತ್ತಿದೆ. ಅದರಲ್ಲಿಯೂ ಪಂದ್ಯ ರದ್ದಾಗುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ. ಅದಕ್ಕೆ ಮುಖ್ಯ ಕಾರಣ ಎಂದರೆ ಅದು ಕಳೆದ ದಿನದಿಂದ ಆರಂಭವಾಗಿರುವ ಮಳೆ. ಹೌದು, ರಣ ಬಿಸಿಲಿನಿಂದ ತತ್ತರಿಸಿ ಹೋಗಿದ್ದ ರಾಜಧಾನಿಗೆ ಕಳೆದೆರಡು ದಿನಗಳಿಂದ ಮಳೆ ಸುರಿಯುತ್ತಿದೆ.
ಇಂದೂ ಸಹ ಬೆಂಗಳೂರಿನ ಕೆಲವೆಡೆ ಮಳೆ ಆಗಿದ್ದು, ಬೆಂಗಳೂರು ಸೇರಿದಂತೆ ಮುಂದಿನ 4 ದಿನ ಕೆಲ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ವದರಿ ಪ್ರಕಾಟ ಬೆಂಗಳೂರಲ್ಲೂ ಸಂಜೆ ಬಳಿಕೆ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ. ಇದರಿಂದಾಗಿ ನಾಳೆಯೂ ಅಂದರೆ ಮೇ 4ರಂದೂ ಸಹ ಮಳೆಯಾಗುವ ಸೂಚನೆ ನೀಡಲಾಗಿದ್ದು, ಆರ್ಸಿಬಿ ಮತ್ತು ಗುಜರಾತ್ ಪಂದ್ಯ ಬೆಂಗಳೂರಿನಲ್ಲಿಯೇ ನಡೆಯಲಿರುವ ಕಾರಣ ಮಳೆ ಏನಾದರೂ ಅಧಿಕ ಪ್ರಮಾಣದಲ್ಲಿ ಸುರಿದರೆ ಪಂದ್ಯಕ್ಕೆ ಅಡ್ಡಿಯಾಗಲಿದೆ. ಹೀಗಾದರೆ ಪಂದ್ಯದ ಓವರ್ ಕಡಿತ ಆಗಬಹುದು.
ಅದೇ ಒಂದು ವೇಳೆ ಮಳೆ ಸತತವಾಗಿ ಸುರಿದರೆ ಓವರ್ ಕಡಿತದ ಬದಲಾಗಿ ಡಕ್ವರ್ತ್ ನಿಯಮ ಅಥವಾ ರದ್ದಾಗುವ ಸಾಧ್ಯತೆ ಹೆಚ್ಚಿದೆ. ಹೀಗಾದರೆ ಉಭಯ ತಂಡಗಳಿಗೆ ತಲಾ 1 ಅಂಕ ದೊರಕಲಿದೆ. ಹೀಗಾದರೆ ಎರಡೂ ತಂಡಗಳಿಗೆ ಇದು ದೊಡ್ಡ ಹಿನ್ನಡೆಯಾಗಲಿದೆ.