ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಸಲುವಾಗಿ ಸ್ವದೇಶಿ ನಿರ್ಮಿತ ತಂತ್ರಜ್ಞಾನಕ್ಕೆ ಹೆಚ್ಚು ಹೊತ್ತನ್ನ ನೀಡಲಾಗುತ್ತಿದೆ. ಅದರ ಪ್ರತಿಫಲವಾಗಿ ಅತ್ಯಾಧುನಿಕ ಮತ್ತು ಮಾನವ ರಹಿತ ಬಾಂಬರ್ ಡ್ರೋನ್ ವಿಮಾನ ಇಂದು ಅನಾವರಣಗೊಳಿಸಲಾಗಿದೆ. ದೇಶದ ಮೊದಲು ಸ್ವದೇಶಿ ನಿರ್ಮಿತ ಬಾಂಬರ್ ಡ್ರೋನ್ ಅನಾವರಣಗೊಂಡಿದ್ದಾದ್ರು ಎಲ್ಲಿ ಅಂತೀರಾ ನೋಡಿ ಈ ರಿಪೋರ್ಟ್ ನಲ್ಲಿ…
Dr. G. Parameshwar: ಪೆನ್ ಡ್ರೈವ್ ಕೇಸ್: ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗುವುದು – ಡಾ.ಜಿ.ಪರಮೇಶ್ವರ್
ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇಂದು ಭಾರತದ ಮೊಟ್ಟ ಮೊದಲ ಸ್ವದೇಶಿ ನಿರ್ಮಿತ ಮಿಲಿಟರಿ ಬಾಂಬರ್ ಡ್ರೋನ್ ವಿಮಾನವನ್ನ ಲೋಕಾರ್ಪಣೆ ಮಾಡಲಾಯಿತು. ಮೇಕ್ ಇನ್ ಇಂಡಿಯಾ ಯೋಜನೆಯಡಿ ಎಫ್ಡಬ್ಲ್ಯೂಡಿ – 200 ಬಿ ಹೆಸರಿನ ಬಾಂಬರ್ ವಿಮಾನವನ್ನು ಪ್ಲೈಯಿಂಗ್ ವೆಡ್ಜ್ ಅಂಡ್ ಡಿಫೆನ್ಸ್ ಇರೋ ಸ್ಪೇಸ್ ಟೆಕ್ನಾಲಜಿ ಕಂಪನಿ ವತಿಯಿಂದ ನಿರ್ಮಾಣ ಮಾಡಲಾಗಿದೆ. ಭಾರತ ರಕ್ಷಣಾ ಕ್ಷೇತ್ರದ ದುಬಾರಿ ಶಸ್ತ್ರಾಸ್ತ್ರ ಹಾಗೂ ಯುದ್ಧ ಸಾಮಗ್ರಿಗಳಿಗೆ ಬೇರೆ ದೇಶಗಳನ್ನ ಅವಲಂಬನೆಯಾಗಿದೆ. ಹೀಗಾಗಿ ಮೇಡ್ ಇನ್ ಇಂಡಿಯಾ ಯೋಜನೆಗೆ ಕೊಡುಗೆ ನೀಡಲು ಮಾನವ ರಹಿತ ಡ್ರೋನ್ ವಿಮಾನವನ್ನು ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಪಡಿಸಿ ಇಂದು ಲೋಕಾರ್ಪಣೆ ಮಾಡಲಾಗಿದೆ. ಈ ವಿಮಾನ ನಾಲ್ಕು ಇಂಜಿನ್ ಹೊಂದಿದ್ದು ಏಕಕಾಲಕ್ಕೆ 2 ಸಾವಿರ ಕಿ.ಮೀ ದೂರ ಹಾಗೂ 20 ಗಂಟೆಗಳ ಕಾಲ ನಿರಂತರ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿಯ ಸಿಇಓ ಸುಹಾಸ್ ತೇಜಸ್ಕಂದ ತಿಳಿಸಿದರು.
ಇನ್ನೂ ಇತ್ತಿಚೆಗೆ ಯುದ್ದದ ಆಯಾಮಗಳು ಬದಲಾಗಿದೆ. ಇತ್ತಿಚೆಗೆ ನಡೆದ ಉಕ್ರೇನ್ ಹಾಗೂ ರಷ್ಯಾ ಯುದ್ದದಲ್ಲಿ ಸಾಭೀತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಮಾನವರಹಿತ ಡ್ರೋನ್ ಅವಶ್ಯಕತೆ ಹೆಚ್ಚಾಗಿದೆ. ಹೀಗಾಗಿ ನಮ್ಮ ಸಂಸ್ಥೆಯಿಂದ ಭಾರತದ ಮೊಟ್ಟ ಮೊದಲ ಮಾನವರಹಿತ ಡ್ರೋನ್ ನಿರ್ಮಾಣ ಮಾಡಲಾಗಿದೆ. ಈ ವಿಮಾನ ಶತ್ರು ರಾಷ್ಟ್ರದ ಗಡಿಯವರೆಗೂ ಹೋಗಿ 100 ಕ್ಕೂ ಹೆಚ್ಚು ಸಣ್ಣ ಪ್ರಮಾಣ ಡ್ರೋನ್ ಗಳನ್ನು ಬಿಟ್ಟು ಶತ್ರು ರಾಷ್ಟ್ರಗಳ ನೆಲೆಯನ್ನು ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದರು. ಇನ್ನು ಕೆಲವೇ ತಿಂಗಳಲ್ಲಿ ಈ ಡ್ರೋನ್ ವಿಮಾನ ಭಾರತೀಯ ವಾಯು ಸೇನೆಗೆ ಸೇರ್ಪಡೆಯಾಗುವ ವಿಶ್ವಾಸವಿದೆ ಎಂದು ಕಂಪನಿಯ ಸಹ ಸಂಸ್ಥಾಪಕ ಪ್ರಜ್ವಲ್ ತಿಳಿಸಿದರು.
ಒಟ್ಟಿನಲ್ಲಿ ಪ್ರತಿ ಕ್ಷೇತ್ರದಲ್ಲೂ ನಮ್ಮ ದೇಶ ಪ್ರಬಲವಾಗಿರಬೇಕೆಂದರೆ ಎಲ್ಲದಕ್ಕೂ ಮುಖ್ಯವಾಗಿ ಸೇನೆಯಲ್ಲಿ ತಂತ್ರಜ್ಞಾನ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ಲೋಕಾರ್ಪಣೆಯಾಗಿರುವ ದೇಶದ ಮೊದಲ ಸ್ವದೇಶಿ ನಿರ್ಮಿತ ಬಾಂಬರ್ ಡ್ರೋನ್ ಮುಂದಿನ ದಿನಗಳಲ್ಲಿ ವಾಯು ಸೇನೆಗೆ ಸೇರ್ಪಡೆಗೊಂಡು ಯಶಸ್ವಿಯಾಗಲಿ ಎಂದು ಆಶಿಸೋಣ.