ಇಂದಿನ ದಿನಗಳಲ್ಲಿ ಬೆಳಗ್ಗೆ ಎದ್ದ ಕೂಡಲೇ, ಖಾಲಿ ಹೊಟ್ಟೆಗೆ ಕಾಫಿ ಕುಡಿಯುವ ಹೆಚ್ಚಿನವರಿಗೆ ಅಭ್ಯಾಸಕ್ಕಿಂತ ಲೂ ಫ್ಯಾಷನ್ ಆಗಿಬಿಟ್ಟಿದೆ ಎಂದು ಹೇಳಬಹುದು! ಅದರಲ್ಲೂ ಸಿಟಿ ಲೈಫ್ಸ್ಟೈಲ್ಗೆ ಎಡ್ಜೆಸ್ಟ್ ಆದವರಿಗೆ ಈ ಅಭ್ಯಾಸ ಇದ್ದೇ ಇರುತ್ತದೆ! ಮುಖ ತೊಳೆಯದೇ, ಹಲ್ಲುಜ್ಜದೆ ಖಾಲಿ ಹೊಟ್ಟೆಗೆ ಒಂದು ಲೋಟ ಕಾಫಿ ಕುಡಿದರೆ, ಮಾತ್ರವೇ ಅವರಿಗೆ ಸಮಾಧಾನವಾಗುವುದು! ಕೆಲವರಿಗಂತು ಬೆಳಗ್ಗೆ ಕಾಫಿ ಅಥವಾ ಟೀ ಕುಡಿಯದೆ ಹೋದರೆ ತಲೆನೋವು ಬಂದು ಬಿಡುತ್ತದೆ ಎಂದು ಹೇಳುವುದು ಉಂಟು!ಸಕ್ಕರೆ ತಿನ್ನೋದರಿಂದ ನಮಗೆ ಲಾಭ ಶೂನ್ಯ. ಆದ್ರೆ ಸಕ್ಕರೆ ಸೇವನೆ ಮಾಡೋದ್ರಿಂದ ದೊಡ್ಡ ಹಾನಿಯಿದೆ.
ರಕ್ತಹೀನತೆ ಬರುವ ಸಾಧ್ಯತೆ ಹೆಚ್ಚಿರುತ್ತದೆ!
- ಕೆಫಿನ್ ಅಂಶ ಹೆಚ್ಚಿರುವ ಚಹಾ ಅಥವಾ ಕಾಫಿ ಕುಡಿ ಯುವ ಕುಡಿಯುವ ಅಭ್ಯಾಸ ಮಾಡಿಟ್ಟುಕೊಂಡರೆ, ದಿನಾ ಹೋದ ಹಾಗೆ ನಮ್ಮ ದೇಹದ ರಕ್ತದಲ್ಲಿ ಪಾಲಿಫಿನಾಲ್ ಹಾಗೂ ಟ್ಯಾನಿನ್ ಎನ್ನುವ ಸಂಯುಕ್ತ ಅಂಶಗಳ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ.
- ಇದರಿಂದ ನಾವು ಸೇವಿಸುವ ಆಹಾರ ಪದಾರ್ಥಗಳಿಂದ, ಸಿಗಬಹುದಾದ ಕಬ್ಬಿಣಾಂಶದ ದೇಹಕ್ಕೆ ಸರಿಯಾಗಿ ಸಿಗದೇ ಹೋಗಬಹುದು! ಇದರ ಅಡ್ಡಪರಿಣಾಮ ಎನ್ನುವಂತೆ, ಮುಂದಿನ ದಿನಗಳಲ್ಲಿ ರಕ್ತಹೀನತೆ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.
ಮಲಬದ್ಧತೆ-ಅಜೀರ್ಣ ಕಂಡು ಬರುವ ಸಾಧ್ಯತೆ ಇರುತ್ತದೆ
- ಆರೋಗ್ಯ ತಜ್ಞರು ಹೇಳುವ ಪ್ರಕಾರ, ಯಾರು ವಿಪರೀತ ವಾಗಿ ಸಕ್ಕರೆ ಬೆರೆಸಿರುವ ಚಹಾ-ಕಾಫಿ ಹೆಚ್ಚಾಗಿ ಕುಡಿ ಯುವ ಅಭ್ಯಾಸ ಮಾಡಿಕೊಂಡಿರುವವರಿಗೆ ಅಜೀರ್ಣ- ಮಲಬದ್ಧತೆ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿರುತ್ತ ದೆಯಂತೆ!
- ಇದಕ್ಕೆ ಪ್ರಮುಖ ಕಾರಣಗಳು ಏನೆಂದರೆ ಮೊದಲೇ ಹೇಳಿದ ಹಾಗೆ, ದಿನದಲ್ಲಿ ಮೂರು-ನಾಲ್ಕು ಬಾರಿಕ್ಕಿಂ ತಲೂ ಹೆಚ್ಚಾಗಿ ಈ ಪಾನೀಯದ ಸೇವನೆಯಿಂದ ನಿರ್ಜ ಲೀಕರಣ ಸಮಸ್ಯೆ ಉಂಟಾಗಿ ಬಿಡುತ್ತದೆ. ಇದರಿಂದಾಗಿ ದೇಹದಲ್ಲಿರುವ ನೀರಿನಾಂಶ ಕಡಿಮೆ ಆಗಿ, ಇಂತಹ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.
ಜೀರ್ಣಕ್ರಿಯೆಯ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ
- ಸಕ್ಕರೆ ಬೆರೆಸಿದ ಚಹಾ ಅಥವಾ ಕಾಫಿಯಲ್ಲಿ ಕಂಡು ಬರುವ ಕೆಫೀನ್ ಅಂಶಗಳು, ಕರುಳಿನ ಭಾಗದಲ್ಲಿ ಆಮ್ಲೀಯ ಪ್ರಭಾವವನ್ನು ಹೆಚ್ಚು ಮಾಡುತ್ತದೆ. ಇದರಿಂ ದಾಗಿ ಜೀರ್ಣಕ್ರಿಯೆಯ ವ್ಯವಸ್ಥೆಯಲ್ಲೂ ಕೂಡ ಸಮಸ್ಯೆ ಗಳು ಕಂಡು ಬರಲು ಶುರುವಾಗುತ್ತದೆ.
- ಕೊನೆಗೆ ಇದೇ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಾದ ಅಜೀರ್ಣತೆ, ಮಲಬದ್ಧತೆ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಹೆಚ್ಚಿರುತ್ತದೆ!
- ವಿಶೇಷವಾಗಿ ಟೀ-ಕಾಫಿಗೆ ಹಾಕುವ ಹಾಲು ಸಕ್ಕರೆಯ ಜೊತೆ ಕೆಫಿನ್ ಅಂಶ ಮಿಕ್ಸ್ ಆಗಿ ಬಿಟ್ಟರೆ, ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ.
ಡಿಹೈಡ್ರೇಷನ್ ಸಮಸ್ಯೆ ಕಂಡು ಬರುತ್ತದೆ
- ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಯಗೆ ಸಕ್ಕರೆ ಬೆರೆಸಿದ ಚಹಾ ಅಥವಾ ಕಾಫಿ ಕುಡಿಯುವವರಿಗೆ ದೇಹದಲ್ಲಿ ಡಿಹೈಡ್ರೇಷನ್ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.
- ಅಂದರೆ ಇಲ್ಲಿ ಪ್ರಮುಖವಾಗಿ ಗಮನಿಸ ಬೇಕಾದ ಸಂಗತಿ ಏನೆಂದರೆ, ಟೀ-ಕಾಫಿಗೆ ಸಕ್ಕರೆಯನ್ನು ಕೂಡ ಬೆರೆಸುವುದರಿಂದ, ಆರೋಗ್ಯದ ಮೇಲೆ ಇನ್ನಷ್ಟು ಅಡ್ಡಪರಿಣಾಮಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.
- ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲಿ ಎಂದು ಹಲವು ಬಾರಿ ಸಾಬೀತಾಗಿದೆ. ಹೀಗಾಗಿ ಸಕ್ಕರೆ ಬೆರೆಸಿದ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡವರಲ್ಲಿ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಕಂಡು ಬರುತ್ತದೆ. ಇದಕ್ಕೆ ಪ್ರಮುಖ ಕಾರಣ ದೇಹದ ನೀರಿನಾಂಶ ಮೂತ್ರದ ಮೂಲಕ ಹೊರ ಹೋಗುತ್ತಾ ಇರುತ್ತದೆ.
ಪೌಷ್ಟಿಕ ಸತ್ವಗಳು ಕಡಿಮೆ ಆಗುತ್ತಾ ಬರುತ್ತದೆ…
- ಮೊದಲೇ ಹೇಳಿದ ಹಾಗೆ, ನಾವು ಪ್ರತಿದಿನ ಸೇವಿಸುವ ಆರೋಗ್ಯ ಕಾರಿ ಆಹಾರ ಪದಾರ್ಥಗಳಲ್ಲಿ ಸಿಗುವ ಪೌಷ್ಟಿಕ ಸತ್ವಗಳಾದ ಕಬ್ಬಿಣಾಂಶ, ಕ್ಯಾಲ್ಸಿಯಂ, ಪ್ರೋಟೀನ್ ಇತ್ಯಾದಿ ಖನಿಜಾಂಶ ಗಳನ್ನು ನಮ್ಮ ದೇಹ ಹೀರಿಕೊ ಳ್ಳುತ್ತದೆ.
- ಆದರೆ ಬೆಳಗ್ಗೆ ಎದ್ದ ಕೂಡಲೇ, ಸಿಹಿ ಆಗಿರುವ ಇಂತಹ ಟೀ-ಕಾಫಿ ಕುಡಿಯುವುದರಿಂದ ಪೌಷ್ಟಿಕ ಸತ್ವಗಳು ದೇಹಕ್ಕೆ ಲಭ್ಯವಾಗುವುದಿಲ್ಲ.
ಗರ್ಭಿಣಿಯರು ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು!
- ಮೊದಲೇ ಹೇಳಿದ ಹಾಗೆ ಚಹಾ ಅಥವಾ ಕಾಫಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ಅಂಶಗಳು ಕಂಡು ಬರು ವುದರಿಂದ, ಗರ್ಭಿಣಿಯರು ಇದರಿಂದ ದೂರವಿದ್ದರೆ ಒಳ್ಳೆಯದು!
- ಪ್ರಮುಖವಾಗಿ ಟೀ -ಕಾಫಿ ರೆಡಿ ಮಾಡುವಾಗ ಸಕ್ಕರೆ ಯನ್ನು ಕೂಡ ಸೇರಿಸುವುದರಿಂದ, ಗರ್ಭಿಣಿಯರ ಆರೋ ಗ್ಯಕ್ಕೆ ಇದರಿಂದ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಪ್ರಮುಖವಾಗಿ ಗರ್ಭಪಾತ ಹಾಗೂ ಭ್ರೂಣ ದಲ್ಲಿ ಬೆಳೆಯುವ ಮಗುವಿನ ಮೇಲೆಯೂ ಕೂಡ ಪರಿಣಾಮ ಬೀಳಬಹುದು.