ಮೈಸೂರು:- ಮೇ ತಿಂಗಳ 4 ದಿನಗಳ ಕಾಲ ಮೈಸೂರು-ಬೆಳಗಾವಿ ರೈಲು ವಿಳಂಬವಾಗಲಿದೆ. ಮೈಸೂರು-ಬೆಳಗಾವಿ ಮಾರ್ಗದಲ್ಲಿ ಬರುವಂತಹ ಹುಬ್ಬಳ್ಳಿ ಯಾರ್ಡ್ನಲ್ಲಿ ಸ್ವಿಚ್ ನವೀಕರಣ ಕಾರ್ಯವನ್ನು ಕೈಗೊತ್ತಿಕೊಳ್ಳುತ್ತಿರುವ ಹಿನ್ನೆಲೆ ವಿಳಂಬ ಆಗಲಿದೆ.
ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ಎಕ್ಸಪ್ರೆಸ್ ಈ ಮಾರ್ಗ ಮಧ್ಯೆ 4 ದಿನಗಳ ಕಾಲ 40 ನಿಮಿಷ ತಡವಾಗಿ ಸಂಚರಿಸಲಿದೆ. ಮೇ 1, 2 ಹಾಗೂ ಇದೇ ತಿಂಗಳ 8 ಮತ್ತು 9 ರಂದು 40 ನಿಮಿಷಗಳ ಕಾಲ ತಡವಾಗಿ ಸಂಚರಿಸಲಿದೆ. ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸಿಕೊಂಡು ರೈಲು ನಿಲ್ದಾಣಕ್ಕೆ ತೆರಳುವುದು ಉತ್ತಮ.
ಈ ರೈಲು ಮೈಸೂರು ಜಂಕ್ಷನ್ನಿಂದ ಬೆಳಗ್ಗೆ 5.40ಕ್ಕೆ ಹೊರಟು ರಾತ್ರಿ 9.30ಗೆ ಬೆಳಗಾವಿ ತಲುಪುತ್ತದೆ. ಆದರೆ, 40 ನಿಮಿಷ ತಡವಾಗಿ ಸಂಚರಿಸುವುದರಿಂದ ರೈಲು ಬೆಳಗ್ಗೆ 6.20ಕ್ಕೆ ಹೊರಡಲಿದೆ. ಈ ವಿಳಂಬ ಸ್ಥಿತಿ ಕೇವಲ 4 ದಿನಗಳಿಗಷ್ಟೇ ಸೀಮಿತವಾಗಿರಲಿದೆ.