ಬೆಂಗಳೂರು:- ಮಳೆ ಕೊರತೆ ಹಿನ್ನೆಲೆ ಬೆಂಗಳೂರಿನ ಪ್ರಸಿದ್ಧ ಕೆರೆ ಸ್ಯಾಂಕಿ ಕೆರೆ ಬತ್ತಿ ಹೋಗುತ್ತಿದೆ. 1874 ರಲ್ಲಿ ಬರಗಾಲದ ಸಮಯದಲ್ಲಿ ನೀರಿನ ಕೊರೆತೆಯನ್ನು ನೀಗಿಸಲು ಕರ್ನಲ್ ರಿಚರ್ಡ್ ಹಿರಾಮ್ ಸ್ಯಾಂಕಿ ಅವರು 1882ರಲ್ಲಿ ಸ್ಯಾಂಕಿ ಟ್ಯಾಂಕ್ ಕೆರೆಯನ್ನು ನಿರ್ಮಿಸಿದರು. ದಶಕಗಳ ಕಾಲ ಬೆಂಗಳೂರು ಉತ್ತರ ಭಾಗದಲ್ಲಿನ ಜನರಿಗೆ ಕುಡಿಯುವ ನೀರಿಗೆ ಇದೇ ಕೆರೆ ಆಧಾರವಾಗಿತ್ತು. ಆದರೆ ದಿನಗಳು ಕಳೆದಂತೆ ಈ ಕೆರೆಯ ನೀರಿನ ಬಳಕೆಯನ್ನು ನಿಲ್ಲಿಸಲಾಗಿತ್ತು. ಈ ಭಾಗದಲ್ಲಿನ ಅಂತರ್ಜಲ ಮಟ್ಟ ಸ್ಥಿರತೆಗೆ ನೆರೆವಾಗಿದ್ದ ಸ್ಯಾಂಕಿ ಟ್ಯಾಂಕ್ ಕೆರೆ ಇದೀಗ ಬಹುತೇಕ ಒಣಗಿ ಹೋಗಿದೆ.
ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ: ಇಂದು ಈ ಜಿಲ್ಲೆಗಳಲ್ಲಿ ರಜೆ ಘೋಷಣೆ!
ನಗರದ ಐಐಎಸ್ಸಿ, ಸದಾಶಿವನಗರ ಹಾಗೂ ನೆರೆಯ ಪ್ರದೇಶಗಳಲ್ಲಿ ಬೀಳುವ ಮಳೆಯ ನೀರು ಈ ಕೆರೆಗೆ ಆಶ್ರಯವಾಗಿದೆ. ಆದರೆ ಈ ಬಾರಿ ನಗರದಲ್ಲಿ ಅತ್ಯಲ್ಪ ಮಳೆ ಹಾಗೂ ಹೆಚ್ಚುತ್ತಿರುವ ತಾಪಮಾನದಿಂದಾಗಿ ಕೆರೆಯಲ್ಲಿನ ನೀರು ವೇಗವಾಗಿ ಆವಿಯಾಗುತ್ತಿದೆ. ಕೆರೆಯ ಸುತ್ತಮುತ್ತ ಇರುವ ಕಾಂಕ್ರೀಟ್ ಪ್ರದೇಶಗಳು ಹಾಗೂ ಬೋರ್ವೆಲ್ಗಳ ಮೂಲಕ ಅಂತರ್ಜಲವನ್ನು ಅತಿಯಾಗಿ ಬಳಸುತ್ತಿರುವುದರಿಂದ ಕೆರೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಲು ಮತ್ತೊಂದು ಕಾರಣವಾಗಿದೆ
ಒಟ್ಟಿನಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸಾವಿರಾರು ಮಂದಿ ಇಲ್ಲಿ ವಾಕಿಂಗ್ ಮಾಡುತ್ತಾರೆ. ನೀರು ಇರುವ ಕಾರಣ ವಾತಾವರಣ ಕೂಲ್ ಆಗಿರುತ್ತದೆ. ಆದರೆ ಐತಿಹಾಸಿಕ ಕೆರೆ ಬತ್ತುತ್ತಿರುವುದು ವಾಯುವಿವಾರಿಗಳ ಬೇಸರಕ್ಕೆ ಕಾರಣವಾಗಿದೆ