ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲುವಿನ ಮೂಲಕ ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ತವರಿನಲ್ಲಿ ನಡೆದ ಭಾನುವಾರದ ಪಂದ್ಯದಲ್ಲಿ 78 ರನ್ಗಳ ಗೆಲುವು ಸಾಧಿಸಿದೆ.
Gold Price: ಇಳಿಕೆ ಕಾಣದ ಚಿನ್ನದ ಬೆಲೆ: ಇಲ್ಲಿದೆ ಇವತ್ತಿನ ದರಪಟ್ಟಿ..!
ಬ್ಯಾಟಿಂಗ್ ಮೂಲಕ ಎದುರಾಳಿಗಳನ್ನು ಬೆದರಿಸುತ್ತಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡ ಸತತ 2ನೇ ಸೋಲಿಗೆ ಶರಣಾಗಿದೆ. ಆರ್ಸಿಬಿ ವಿರುದ್ಧ 35 ರನ್ಗೆ ಮಂಡಿಯೂರಿದ ಎಸ್ಆರ್ಹೆಚ್, ಈಗ ಚೆನ್ನೈ ಸೂಪರ್ ಕಿಂಗ್ಸ್ ಎದುರು 78 ರನ್ಗಳಿಂದ ಸೋಲೊಪ್ಪಿಕೊಂಡಿದೆ. ಇದರೊಂದಿಗೆ ಟೂರ್ನಿಯಲ್ಲಿ 4ನೇ ಸೋಲು ಅನುಭವಿಸಿತು. ಮತ್ತೊಂದೆಡೆ ಎಲ್ಎಸ್ಜಿ ವಿರುದ್ಧ ಸತತ ಎರಡು ಸೋಲುಂಡಿದ್ದ ಸಿಎಸ್ಕೆ ತವರಿನಲ್ಲಿ ಕೊನೆಗೂ ಲಯಕ್ಕೆ ಮರಳಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು, ಎಸ್ಆರ್ಹೆಚ್ 4ನೇ ಸ್ಥಾನಕ್ಕೆ ಕುಸಿಯಿತು.
ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ನ 46ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್ಕೆ, ಸ್ಪಿನ್ ಪಿಚ್ನಲ್ಲಿ ಬೃಹತ್ ಮೊತ್ತ ಪೇರಿಸಿತು. ಋತುರಾಜ್ ಗಾಯಕ್ವಾಡ್ ಜಸ್ಟ್ ಮಿಸ್ ಮಾಡಿಕೊಂಡರು. ಋತುರಾಜ್ 98 ರನ್ ಪೇರಿಸಿದರೆ, ಸತತ ವೈಫಲ್ಯದಿಂದ ಲಯಕ್ಕೆ ಮರಳಿದ ಡ್ಯಾರಿಲ್ ಮಿಚೆಲ್ ಅರ್ಧಶತಕ ಸಿಡಿಸಿ ಮಿಂಚಿದರು. ಪರಿಣಾಮ 20 ಓವರ್ಗೆ 3 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಆದರೆ ಎಸ್ಆರ್ಹೆಚ್, 134 ರನ್ ಗಳಿಸಲು ಶಕ್ತವಾಯಿತು.