ಬೆಂಗಳೂರು:- ಕುಖ್ಯಾತ ರೌಡಿ ಶೀಟರ್ ಕುಣಿಗಲ್ ಗಿರಿ ಕೊಲೆಗೆ ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕಾಮಾಕ್ಷಿಪಾಳ್ಯ ರೌಡಿ ಶೀಟರ್ ಆಗಿರುವ ಗಿರಿ ಅವರು ಕಳೆದ ಎರಡ್ಮುರು ತಿಂಗಳ ಹಿಂದಷ್ಟೇ ಗಿರಿ ಜೈಲಿನಿಂದ ರಿಲೀಸ್ ಆಗಿದ್ದರು. ಗಿರಿ ದುಶ್ಮನ್ ರಾಬರಿ ಕಿಟ್ಟಿ ಜೈಲಿನಿಂದ ಸುಪಾರಿ ಕೊಟ್ಟಿರುವ ಆರೋಪ ಕೇಳಿ ಬಂದಿದೆ.
ರಾಬರಿ ಕಿಟ್ಟಿ ಕ್ಯಾಪ್ಟನ್ ಸೂರಿ ಮರ್ಡರ್ ಕೇಸ್ ನಲ್ಲಿ ತುಮಕೂರು ಜೈಲಿನಲ್ಲಿದ್ದಾನೆ. ತನ್ನ ಶಿಷ್ಯನಾದ ಕೆಂಗೇರಿ ರೌಡಿ ಶೀಟರ್ ಸುನೀಲ @ ಸಿಲಿಂಡರ್ ಸುನೀಲನ್ನ ಜೈಲಿಗೆ ಕರೆಸಿಕೊಂಡು ಸುಪಾರಿ ಕೊಟ್ಟಿದ್ದಾನೆ. ಒಂದಿಬ್ರು ಹುಡುಗರನ್ನ ಹಾಕಿಕೊಂಡು ಸುಂಕದಕಟ್ಟೆಯಲ್ಲಿ ಮನೆ ಮಾಡಿಕೊಂಡು ಗಿರಿ ಕೊಲೆಗೆ ಸುನೀಲ ಸಂಚು ರೂಪಿಸಿದ್ದ. ಮಾಹಿತಿ ಪಡೆದ ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿ ಸಿಬ್ಬಂದಿಯಿಂದ ಸುನೀಲ್ನ ರೂಮ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಲಾಂಗು ಮಚ್ಚಿನ ಸಮೇತ ಸುನೀಲ್ ಲಾಕ್ ಆಗಿದ್ದಾನೆ.
ಸುನೀಲ್ ಜೊತೆಗೆ ಮಂಡ್ಯಮೂಲದ ಅವಿನಾಶ್ ಅನ್ನೋನು ಅಂದರ್ ಆಗಿದ್ದು, ಎಸ್ಕೇಪ್ ಆಗಿರುವ ಇನ್ನಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.