ಬೆಂಗಳೂರು:- ಈ ಸಂಬಂಧ ಮಾತನಾಡಿದ ಅವರು,ಚುನಾವಣೆಗೆ ಕೆಲವೇ ದಿನಗಳು ಉಳಿದಿದ್ದು, ಕೊನೆಯ ಸುತ್ತಿನ ಪ್ರಚಾರ ನಡೆಸುತ್ತಿದ್ದೇವೆ. ಇಷ್ಟು ವರ್ಷದ ಮಾಡಿದ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇನೆ. ಚುನಾವಣೆ ಪ್ರಚಾರ ಭರದಿಂದ ಸಾಗುತ್ತಿದೆ. ರಾಜಕೀಯ ಪ್ರವೇಶ ಮಾಡಿದ ದಿನದಿಂದ ಅಂದರೆ ಸಂಸದನಾಗಿ ಆಯ್ಕೆಯಾದ ದಿನದಿಂದಲೂ ವಾರಕ್ಕೆ ನಾಲ್ಕೈದು ದಿನ ಕ್ಷೇತ್ರದ ಪ್ರವಾಸದಲ್ಲಿರುತ್ತೇನೆ. ಇದು ನನಗೇನೂ ಹೊಸದಲ್ಲ ಎಂದರು
CSK ವಿರುದ್ಧದ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಜಿಗಿದ LSG!
ಮೊದಲಿನಿಂದಲೂ ನಾನು ಮತ್ತು ಅಣ್ಣ ಶಿವಕುಮಾರ್ ಒಂದೇ ವಿಚಾರಧಾರೆಯಲ್ಲಿ ಬೆಳೆದವರು. ನಾವಿಬ್ಬರೂ ಎಲ್ಲಾ ವಿಷಯಗಳನ್ನ ಪರಸ್ಪರ ಹಂಚಿಕೊಳ್ಳುತ್ತಿರುತ್ತೇವೆ. ಡಿಕೆ ಶಿವಕುಮಾರ್ ಅವರು ನನಗೆ ಅಣ್ಣ ಮಾತ್ರವಲ್ಲ, ತಂದೆ ಮತ್ತು ಸ್ನೇಹಿತ ಸ್ಥಾನದಲ್ಲಿ ನಿಂತಿದ್ದಾರೆ. ಅತ್ತಿಗೆ ತಾಯಿ ಸಮಾನ. ಕುಟುಂಬದಲ್ಲಿ ಮಗನಾಗಿದ್ದು, ಜೊತೆಯಾಗಿದ್ದೇವೆ. ಅಣ್ಣ-ಅತ್ತಿಗೆ ನನ್ನ ಎಲ್ಲಾ ಕಷ್ಟಗಳನ್ನ ನೋಡಿಕೊಂಡು ಹೋಗುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದಲೇ ನಮ್ಮ ಬಾಂಧವ್ಯ ಗಟ್ಟಿಯಾಗಿದ್ದು, ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಡಿಕೆ ಸುರೇಶ್ ಹೇಳಿದರು.
ಈ ಮೊದಲು ಡಿಕೆ ಶಿವಕುಮಾರ್ ಜೊತೆಯಲ್ಲಿ ಕೆಲಸ ಮಾಡೋದು ತುಂಬಾ ಚೆನ್ನಾಗಿತ್ತು. ತೆರೆಯ ಹಿಂದೆ ಕೆಲಸ ಮಾಡೋದು ಚೆನ್ನಾಗಿತ್ತು. ಲೋಕಸಭಾ ಸದಸ್ಯನಾದ ನಂತರ ನಾನು ಸಹ ತೆರೆಯ ಮುಂದೆ ಬರಬೇಕಾಯ್ತು. ಈಗ ಕ್ಷೇತ್ರದ ಜವಾಬ್ದಾರಿಯೂ ಇರುತ್ತದೆ. ಕಷ್ಟದ ಕೆಲಸವಾದ್ರೂ ಖುಷಿಯಿಂದ ಮಾಡುತ್ತಿದ್ದೇನೆ ಎಂದರು
ಇದೇ ವೇಳೆ ಸೋದರ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ತಪ್ಪಿದ್ದರ ಬಗ್ಗೆ ಪರೋಕ್ಷವಾಗಿ ಬೇಸರ ಸಹ ಹೊರಹಾಕಿದ್ದಾರೆ. ರಾಜಕಾರಣದಲ್ಲಿ ಎಲ್ಲವೂ ಏಕಕಾಲದಲ್ಲಿ ಆಗುತ್ತೆ ಅಂತ ಹೇಳೋಕೆ ಆಗಲ್ಲ. ರಾಜ್ಯದ ಜನರು ಬದಲಾವಣೆ ಬಯಸಿ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಆಶೀರ್ವಾದ ಮಾಡಿದ್ದಾರೆ. ಭವಿಷ್ಯದಲ್ಲಿ ಒಳ್ಳೆಯದು ಆಗುತ್ತೆ ಅನ್ನೋ ನಿರೀಕ್ಷೆಯಲ್ಲಿ ಕೆಲಸ ಮಾಡಿಕೊಂಡು ಹೋಗಬೇಕು. ಇರೋದು ಒಂದೇ ಸೀಟ್, ಈಗ ಅದರಲ್ಲಿ ಸಿದ್ದರಾಮಯ್ಯನವರು ಕೂತಿದ್ದು, ಅವರೇ ನಮ್ಮ ನಾಯಕರು. ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ಸಿಗುತ್ತೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು