ಚೀನಾ:- ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್ ವಲಯದಲ್ಲಿ ತಮ್ಮ ಉದ್ಯೋಗಗಳನ್ನು ತೊರೆದು ತಮ್ಮದೇ ಆದ ಉದ್ಯಮ ಮತ್ತು ಹೊಸ ಕೆಲಸವನ್ನು ಪ್ರಾರಂಭಿಸುತ್ತಿದ್ದಾರೆ.
ಅನೇಕ ಜನರು ಚೆನ್ನಾಗಿ ಸಂಪಾದಿಸುತ್ತಾ ಯಶಸ್ಸು ಕಂಡಿದ್ದಾರೆ. ನೈಋತ್ಯ ಚೀನಾದ ಯುನ್ನಾನ್ ಪ್ರಾಂತ್ಯದ ನಿವಾಸಿ ಝೌ ಎನ್ನುವ ಯುವತಿ ಉತ್ತಮ ಪ್ಯಾಕೇಜ್ನೊಂದಿಗೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈಕೆಗೆ ತಾನು ಮಾಡುತ್ತಿರುವ ಕೆಲಸದಿಂದ ಹಣಸಿಗುತ್ತಿತ್ತು. ಆದರೆ ಯಾವುದೇ ಖುಷಿಯೂ ಈಕೆಗೆ ಇರಲಿಲ್ಲ. ಒಂದು ದಿನ ಕೆಲಸಕ್ಕೆ ರಾಜೀನಾಮೆ ನೀಡಿದರು. ನಂತರ ಹೊಲಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಆಗ ಅವರ ಗೆಳೆಯರೊಬ್ಬರು ಹಂದಿ ಸಾಕಾಣಿಕೆ ಆರಂಭಿಸುವಂತೆ ಸಲಹೆ ನೀಡಿದರು. ಮೊದಲಿಗೆ ಅವಳು ಹಿಂಜರಿದಳು. ಯಾಕೆಂದರೆ ಅವರಿಗೆ ಈ ಕೆಲಸ ಕೂಡಾ ಇಷ್ಟವಿರಲಿಲ್ಲ.
ಕುಟುಂಬದ ಬೆಂಬಲದೊಂದಿಗೆ ಝೌ ಹಂದಿ ಸಾಕಾಣಿಕೆಯನ್ನು ಪ್ರಾರಂಭಿಸಿದರು. ಈ ಕೆಲಸ ಕೂಡಾ ಅಷ್ಟು ಸುಲಭವಾಗಿರಲಿಲ್ಲ. ಹಂದಿಗಳು ಹೊಲಸು ತೆಗೆಯುವುದು, ಅವುಗಳ ಹೆರಿಗೆಯ ಸಮಯದಲ್ಲಿ, ಅವಳ ಹೊಕ್ಕುಳಬಳ್ಳಿಯನ್ನು ಕಟ್ ಮಾಡಬೇಕಿತ್ತು, ರಕ್ತ ಮತ್ತು ಭಯಾನಕ ವಾಸನೆಯನ್ನು ಎದುರಿಸಬೇಕಾಯಿತು. ಇಷ್ಟಾದರೂ ಬಿಡಲಿಲ್ಲ. ಕೆಲವೇ ದಿನಗಳಲ್ಲಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸೇಷನ್ ಆದರು. ಜನರು ಅವರನ್ನು ರೋಲ್ ಮಾಡೆಲ್ ಎಂದು ಕರೆಯಲು ಪ್ರಾರಂಭಿಸಿದರು. ಅವರ ವಿಡಿಯೋಗಳು ವೈರಲ್ ಆಗತೊಡಗಿದವು. ಝೌ ಅವರ ಈ ಹೆಜ್ಜೆಯಿಂದ ಅನೇಕ ಜನರು ಉತ್ತೇಜಿತರಾದರು ಮತ್ತು ತಮ್ಮ ಉದ್ಯೋಗಗಳನ್ನು ತೊರೆದು ತಮ್ಮದೇ ಆದ ಕೆಲಸವನ್ನು ಪ್ರಾರಂಭಿಸಿದರು. ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಝೌ ನುರಿತ ಕೆಲಸಗಾರನಾಗಿದ್ದಾಳೆ. ಒಳ್ಳೆಯ ಸಂಪಾದನೆ ಕೂಡಾ ಮಾಡುತ್ತಾಳೆ.
ಝೌ ಮಾತನಾಡಿ, ತುಂಬಾ ಖುಷಿಯಾಗಿದ್ದೇನೆ. ಯಾರು ಏನು ಹೇಳುತ್ತಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನೀವು ಮಾಡುವ ಕೆಲಸ್ ಮೇಲೆ ನಂಬಿಕೆ ಇಡಿ. 9 ರಿಂದ 5 ಗಂಟೆವರೆಗಿನ ಕೆಲಸದಿಂದ ನನಗೆ ಹಣ ಸಿಗುತ್ತಿತ್ತು. ಆಯವುದೇ ಖುಷಿ ಇರಲಿಲ್ಲ. ಈಗ ನಾನು ನನ್ನ ಆಯ್ಕೆಯ ಜೀವನವನ್ನು ನಡೆಸುತ್ತಿದ್ದೇನೆ ಎಂದಿದ್ದಾರೆ.
ಚೀನಾದಲ್ಲಿ ಯುವಕ, ಯುವತಿಯುರು ಹಣದ ಬದಲು ಸಂತೋಷ ಮತ್ತು ಜೀವನದ ಗುಣಮಟ್ಟದ ಆಧಾರದ ಮೇಲೆ ಉದ್ಯೋಗಗಳನ್ನು ಆಯ್ಕೆ ಮಾಡುತ್ತಿದ್ದಾರೆ. 30 ವರ್ಷದ ಮಹಿಳೆ ಕಲ್ಲಂಗಡಿ ಕೃಷಿಯನ್ನು ಮಾಡಲು ಕೆಲಸಕ್ಕೆ ರಾಜೀನಾಮೆ ನೀಡಿದ್ದಳು. ನವೆಂಬರ್ 2022 ರಲ್ಲಿ, 22 ವರ್ಷದ ವ್ಯಕ್ತಿಯೊಬ್ಬರು ಸ್ಮಶಾನದಲ್ಲಿ ಕೆಲಸ ಮಾಡಿದರು