ಹುಡುಗರಿಗಿಂತ ಹುಡುಗಿಯರೇ ಅಧಿಕ ಸಮಯ ಆನ್ಲೈನ್ನಲ್ಲಿ ಇರ್ತಾರೆ ಎಂದು ಸಂಶೋಧನೆ ತಿಳಿಸಿದೆ. ಆಹಾರ, ನಿದ್ದೆ ಮತ್ತು ವ್ಯಾಯಾಮದಂತಹ ದೈನಂದಿನ ಅಗತ್ಯ ಚಟುವಟಿಕೆಗಳನ್ನು ತ್ಯಜಿಸುವ ಹಂತಕ್ಕೆ ಇಂದು ಆನ್ಲೈನ್ ಗೀಳು ಜನರನ್ನು ಆವರಿಸಿಬಿಟ್ಟಿದೆ.
ಅದರಲ್ಲಿಯೂ ಅತೀ ಹೆಚ್ಚು ಸಮಯ ಆನ್ಲೈನಲ್ನಲ್ಲಿ ಕಳೆಯುವವರು ಹದಿಹರೆಯದ ವಯಸ್ಸಿನವರು. ಶಾಲೆಗೆ, ಕಾಲೇಜಿಗೆ ಹೋಗುವ ಮಕ್ಕಳೇ ಈ ಚಟಕ್ಕೆ ದಾಸರಾಗಿರುವುದು. ಇದು ಮಕ್ಕಳು ತರಗತಿಗೆ ಹೋಗುವುದನ್ನು ತಪ್ಪಿಸುವುದು, ಗೈರುಹಾಜರಿಗೆ ಕಾರಣವಾಗುತ್ತದೆ ಎಂದು ಫಿನ್ಲ್ಯಾಂಡ್ನಲ್ಲಿ ನಡೆಸಿದ ಹೊಸ ಸಂಶೋಧನೆಯು ಈ ವಿಷಯವನ್ನು ಪತ್ತೆಹಚ್ಚಿದೆ.
ಹುಡುಗರಿಗಿಂತ ಹುಡುಗಿಯರು ಅತಿಯಾಗಿ ಇಂಟರ್ನೆಟ್ ಬಳಸುವಲ್ಲಿ ಹೆಚ್ಚು ಮುಳುಗಿದ್ದಾರೆ. ಬಹುಶಃ ಅವರು ಹುಡುಗರಿಗಿಂತ ಹೆಚ್ಚು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ. ಬಾಲಕರಿಗಿಂತ ಹೆಚ್ಚಾಗಿ ಬಾಲಕಿಯರು ಶಾಲೆಯಿಂದ ಗೈರುಹಾಜರಾಗಿರುವುದನ್ನು ವರದಿ ಹೇಳಿರುವುದು ಕಂಡುಬಂದರೆ, ವೈದ್ಯಕೀಯ ಕಾರಣಗಳಿಂದಾಗಿ ಹುಡುಗಿಯರು ಹೆಚ್ಚಿನ ಗೈರುಹಾಜರಿಯಾಗಿದ್ದಾರೆ ಎಂದು ತಿಳಿಸಿದೆ.
ಅಧ್ಯಯನಕ್ಕಾಗಿ ಸಂಶೋಧಕರು 14-16 ವರ್ಷ ವಯಸ್ಸಿನ 86,000ಕ್ಕೂ ಹೆಚ್ಚು ಹದಿಹರೆಯದವರ ಡೇಟಾವನ್ನು ಪರಿಶೀಲಿಸಿದ್ದಾರೆ. ಇದನ್ನು ರಾಷ್ಟ್ರೀಯ ದ್ವೈವಾರ್ಷಿಕ ಸಮೀಕ್ಷೆಯ ಶಾಲಾ ಆರೋಗ್ಯ ಪ್ರಚಾರ ಅಧ್ಯಯನದಿಂದ ತೆಗೆದುಕೊಳ್ಳಲಾಗಿದೆ. ಮಧ್ಯ ವಯಸ್ಕರು ತಮ್ಮ ನಿದ್ರೆ ಮತ್ತು ದೈಹಿಕ ಚಟುವಟಿಕೆಯ ಬಗ್ಗೆ ಪೋಷಕರೊಂದಿಗೆ ಎಷ್ಟು ವಿಷಯ ಹಂಚಿಕೊಳ್ಳುತ್ತಾರೆ? ಅವರ ಸಂಬಂಧ ಹೇಗಿದೆ? ಎಂಬುದರ ಕುರಿತು ವಿಶ್ಲೇಷಣೆ ಮಾಡಿದೆ.
ಹದಿಹರೆಯದವರ ಇಂಟರ್ನೆಟ್ ಬಳಕೆಯನ್ನು ಮೌಲ್ಯೀಕರಿಸಿದ ಸ್ಕೇಲ್ ಬಳಕೆಯ ಮೂಲಕ ಅಳೆಯಲಾಗುತ್ತದೆ. ಅತಿಯಾದ ಇಂಟರ್ನೆಟ್ ಬಳಕೆ (EIU). ಇದರ ಸಹಾಯದಿಂದ ಕುಟುಂಬದವರೊಂದಿಗೆ, ಸ್ನೇಹಿತರು ಮತ್ತು ಅಧ್ಯಯನದ ಬಗ್ಗೆ ನಿರ್ಲಕ್ಷ್ಯ ಮಾಡುವುದು ಹೀಗೆ ಮುಂತಾದ ಸಮಸ್ಯೆಗಳಿಗೆ ಆನ್ಲೈನ್ನಲ್ಲಿರುವುದೇ ಪ್ರಮುಖ ಕಾರಣ ಎಂದು ತಿಳಿಸುತ್ತದೆ. ಊಟ ಅಥವಾ ನಿದ್ರೆ ಮಾಡದಿರುವಂತಹ ಅಂಶಗಳನ್ನು ಇದು ಆಧರಿಸಿದೆ.
ಹುಡುಗರಿಗಿಂತ ಹುಡುಗಿಯರು 96 ಪ್ರತಿಶತದಷ್ಟು ಇಂಟರ್ನೆಟ್ ಅನ್ನು ಅತಿಯಾಗಿ ಬಳಸಲು ಇಷ್ಟಪಡುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಹಾಗೆಯೇ ಇರಲು 79 ಪ್ರತಿಶತದಷ್ಟು ಬಾಲಕಿಯರು ಇಷ್ಟಪಡುತ್ತಾರೆ. ವಾರದ ದಿನಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಎಂಟು ಗಂಟೆಗಳಿಗಿಂತ ಕಡಿಮೆ ಕಾಲ ನಿದ್ರಿಸುತ್ತಾರೆ ಎಂಬುದನ್ನು ಸಂಶೋಧಕರು ಪತ್ತೆಹಚ್ಚಿದ್ದಾ