ದೊಡ್ಡಬಳ್ಳಾಪುರ: ಬೋನಿಗೆ ಬಿದ್ದ ಮತ್ತೊಂದು ಚಿರತೆಯನ್ನು ಸೆರೆ ಹಿಡಿದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕು ಸಾಸಲು ಬಳಿಯ ಸೂಲುಕುಂಟೆ ಗ್ರಾಮದಲ್ಲಿ ಜರುಗಿದೆ.
ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿದೆ ರೀಲ್ಸ್ ಗೋಜು…KSRTC ಬಸ್ ನಲ್ಲಿ ಯುವಕನ ಹುಚ್ಚಾಟ!
ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಗ್ರಾಮಸ್ಥರ ನಿದ್ದೆ ಕೆಡಿಸಿದ್ದ ಚಿರತೆ ಕೊನೆಗೂ ಬೋನಿನಲ್ಲಿ ಸೆರೆಯಾಗಿದೆ. ಕಾಟ ಕೊಡ್ತಿದ್ದ ಚಿರತೆ ಸೆರೆಯಾದ ಹಿನ್ನಲೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಸೂಲುಕುಂಟೆ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಈ ಚಿರತೆ ಹಾವಳಿ ನೀಡುತ್ತಿತ್ತು. ಗ್ರಾಮದ ಮನೆ ಬಳಿ ಬಂದು ಸಾಕು ಪ್ರಾಣಿಗಳ ಹೊತ್ತೊಯ್ಯುತ್ತಿತ್ತು. ಈ ಮೂಲಕ ಗ್ರಾಮಸ್ಥರ ನಿದ್ರೆ ಕೆಡಿಸಿದ್ದ ಚಿರತೆ ಸದ್ಯ ಬೋನಿಗೆ ಬಿದ್ದಿದೆ.