ಕೋಲಾರ:– ಬಾಲ್ಯದಲ್ಲಿ ಕೋಲಾರಕ್ಕೆ ಬಂದಿದ್ದ ಕ್ಷಣವನ್ನು ರಾಹುಲ್ ಗಾಂಧಿ ಅವರು ಮೆಲುಕು ಹಾಕಿದ್ದಾರೆ.
ಚೊಕ್ಕಂಡಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಚಿಕ್ಕವನಿದ್ದಾಗ ಕೋಲಾರ ಗೋಲ್ಡ್ ಫೀಲ್ಡ್ಗೆ ಇಂದಿರಾಗಾಂಧಿ ಅವರ ಜೊತೆ ಬಂದಿದ್ದೆ. ಸುರಂಗದ ಒಳಗೆ ಹೋಗಿ ಅಲ್ಲಿ ಕಾರ್ಮಿಕರನ್ನ ಮಾತನಾಡಿಸಿದ್ದು ನೆನಪಿದೆ ಎಂದು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ.
ಜೈ ಶ್ರೀ ರಾಮ್ ಇಲ್ಲ, ಓನ್ಲೀ ಅಲ್ಲಾ ಹು ಅಕ್ಬರ್ – ಹಿಂದೂ ಯುವಕರನ್ನು ಅಡ್ಡಗಟ್ಟಿ ಮುಸ್ಲಿಂ ಯುವಕರ ಪುಂಡಾಟ!
ಅಲ್ಲಿ ಚಿನ್ನದ ಇಟ್ಟಿಗೆಯನ್ನ ನೋಡಿದೆ. ಅಲ್ಲಿ ಕೋಲಾರ ಸಂಪನ್ಮೂಲ ಆ ಗಣಿಯಲ್ಲಿದೆ ಎಂದು ತಿಳಿಯಿತು. ರೈತರಾಗಿ, ಕಾರ್ಮಿಕರಾಗಿ ದುಡಿದು ಗೌರವ ತರುತ್ತಿದ್ದೀರ. ನನ್ನ ರಾಜಕಾರಣದ ಗುರುಗಳು ಇಂದಿರಾ ಗಾಂಧಿ ಅವರು. ಅವರು ಹಲವಾರು ರಾಜಕೀಯ ವಿಚಾರಗಳನ್ನು ಹೇಳಿಕೊಟ್ಟಿದ್ದಾರೆ. ಹಲವಾರು ಜನ ರಾಜಕಾರಣವನ್ನ ಕಷ್ಟದ ಕೆಲಸ ಎಂದುಕೊಂಡಿದ್ದಾರೆ. ರಾಜಕಾರಣ ಮಾಡಬೇಕಾದರೆ ಸಾಕಷ್ಟು ಪ್ಲಾನ್ ಮಾಡಬೇಕು ಅಂದಿಕೊಂಡಿದ್ದಾರೆ. ಆದರೆ ಇಂದಿರಾಗಾಂಧಿ ಈ ರೀತಿಯ ರಾಜಕಾರಣ ಮಾಡಲಿಲ್ಲ ಎಂದು ಹೇಳಿದರು.
ಅವರು ನನ್ನೊಂದಿಗೆ ಮಾತನಾಡಿದಾಗ ಒಂದು ಅಂಶ ಹೇಳಿದರು. ಆ ಒಂದು ಪಾಠದಿಂದ ಪೂರ್ತಿ ರಾಜಕಾರಣ ಅರ್ಥ ಮಾಡಿಕೊಳ್ಳಬಹುದು. ರಾಹುಲ್ ನಾಯಕನಿಗೆ ಇರುವುದು ಒಂದೇ ಕೆಲಸ. ಒಬ್ಬ ನಾಯಕ ಸಾಮಾಜದಲ್ಲಿರುವ ತಾರತಮ್ಯವನ್ನ ಗುರುತಿಸಬೇಕು. ಆ ತಾರತಮ್ಯವನ್ನ ಹೆಜ್ಜೆ ಹಿಂದೆ ಇಡದೆ ಮಾಡಬೇಕು. ಅವರು ಹೇಳಿಕೊಟ್ಟ ಪಾಠದಲ್ಲಿ ಇದೆ ಅತ್ಯಂತ ಪ್ರಮುಖವಾದುದು ಎಂದರು.
ಈ ದೇಶದಲ್ಲಿ ಕೋಟ್ಯಾಂತರ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಇವಾಗ ನಾವು ರೈತರ ಸಾಲ ಮನ್ನಾ ಮಾಡಿದರೆ, ಮುಂದೆ 25 ವರ್ಷಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಕ್ಕೆ ಆಗುವಷ್ಟು ಆ ಬಿಲೆನಿಯರ್ಸ್ಗೆ ನೀಡಿದ್ದಾರೆ. 22 ಜನ ಬಿಲೆನಿಯರ್ಸ್ ಆಸ್ತಿ, ಇಡೀ ದೇಶದ ಆಸ್ತಿ ಒಂದೇ. ಈ ದೇಶದ ಆಸ್ತಿ ಬರೀ 22 ಜನರ ಹತ್ತಿರ ಮಾತ್ರ ಇದೆ ಎಂದು ಕಿಡಿಕಾರಿದ್ದಾರೆ.