ಬೆಂಗಳೂರು:- ನಗರದ ವಿದ್ಯಾರಣ್ಯಪುರದ ಬೆಟ್ಟಳ್ಳಿ ಮಸೀದಿ ಬಳಿ ರಾಮನವಮಿ ಮುಗಿಸಿಕೊಂಡು ಕಾರಿನಲ್ಲಿ ಹೋಗುತ್ತಿದ್ದವರನ್ನ ಅಡ್ಡಗಟ್ಟಿ ಅನ್ಯಕೋಮಿನ ಯುವಕರು ಪುಂಡಾಟ ಮೆರೆದ ಘಟನೆ ಜರುಗಿದೆ.
ಇಬ್ಬರು ಮುಸ್ಲಿಂ ಯುವಕರು ‘ಕಾರಿನ ಬಳಿ ಬಂದು ಜೈ ಶ್ರೀರಾಮ್ ಎಂದು ಹೇಳಬೇಕಾ, ಜೈ ಶ್ರೀ ರಾಮ್ ಇಲ್ಲ. ಓನ್ಲೀ ಅಲ್ಲಾ ಹು ಅಕ್ಬರ್ ಎಂದು ಹೇಳಿ, ಇದಲ್ಲದೆ ಕಾರಿನಲ್ಲಿ ಇದ್ದವರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ.
ಸಂವಿಧಾನದ ರಕ್ಷಣೆಯಾಗಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು -ಮಲ್ಲಿಕಾರ್ಜುನ ಖರ್ಗೆ
ಇದೇ ವೇಳೆ ಕಾರಿನಲ್ಲಿದ್ದ ಯುವಕರು, ನಾವು ನಿಮ್ಮ ಹಬ್ಬದಲ್ಲಿ ಹೀಗೆ ಮಾಡ್ತಿವಾ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಅಲ್ಲೆ ಇದ್ದ ಮತ್ತೆ ಇಬ್ಬರು ಸೇರಿಕೊಂಡು ಮೂವರು ಹಿಂದು ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನು ಘಟನೆ ಕುರಿತು ಮಾತನಾಡಿದ ಈಶಾನ್ಯ ಡಿಸಿಪಿ ಲಕ್ಷ್ಮೀ ಪ್ರಸಾದ್, ‘ ಬೆಂಗಳೂರಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಯುವಕರನ್ನು ಅಡ್ಡಗಟ್ಟಿ ಪುಂಡಾಟ ಮೆರೆದಿದ್ದಾರೆ. ಈ ಹಿನ್ನಲೆ ಐಪಿಸಿ ಸೆಕ್ಷನ್ 295a, 298, 143, 147, 504,324, 326, 149, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಯುವಕರು ಕಾರಿನಲ್ಲಿ ಹೋಗುವಾಗ ಬಾವುಟ ಹಿಡಿದುಕೊಂಡು ಜೈ ಶ್ರೀರಾಮ್ ಅಂದಿದ್ದಾರೆ. ಈ ವೇಳೆ ಇಬ್ಬರು ಯುವಕರು ಕಾರು ಅಡ್ಡಗಟ್ಟಿದ್ದಾರೆ. ಜೈ ಶ್ರೀರಾಮ್ ಅಂತಾ ಯಾಕೆ ಕೂಗ್ತಿರಾ, ಅಲ್ಲಾ ಅನ್ನಿ ಎಂದು ಗಲಾಟೆ ಮಾಡಿದ್ದಾರೆ. ಗಲಾಟೆ ಮಾಡಿ ಮತ್ತಷ್ಟು ಯುವಕರನ್ನು ಕರೆತಂದಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಇನ್ನೂ ಮೂವರು ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತು ಕೇಸ್ ರಿಜಿಸ್ಟರ್ ಆಗಿದೆ ಎಂದರು.