ಕೆ.ಆರ್.ಪುರ, ಏ.19-ಶ್ರೀರಾಮನವಮಿಯ ಅಂಗವಾಗಿ ಕ್ಷೇತ್ರದ ಬಸವನಪುರ ಗ್ರಾಮದ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮನವಮಿಯ ಸಡಗರ ಮುಗಿಲು ಮುಟ್ಟಿತ್ತು. ರಾಮನ ಜೈಕಾರದ ಘೋಷಣೆ ಮೊಳಗಿತು. ರಾಮನವಮಿಯ ಆಚರಣೆ ಪಾನಕ, ಕಸಂಬರಿ ವಿತರಣೆ ಜೋರಾಗಿತ್ತು. ಶ್ರೀರಾಮನವಮಿಯನ್ನು ಸಡಗರ ಸಂಭ್ರಮದಿಂದ, ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಬಸವನಪುರ ಸುತ್ತಮುತ್ತಲಿನ ಬಡಾವಣೆಗಳ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಭಗವಂತನ ಕೃಪೆಗೆ ಪಾತ್ರರಾದರು.
ಶ್ರೀರಾಮನವಮಿಯ ಪ್ರಯುಕ್ತ ಶ್ರೀ ಅಭಯಾಂಜನೇಯ ಸ್ವಾಮಿ ದೇವಲಾಯಕ್ಕೆ ಬಗೆ ಬಗೆಯ ಹೂಗಳಿಂದ ಅಲಂಕರ ಮಾಡಿ ಸಿಂಗಾರ ಮಾಡಲಾಗಿತ್ತು.ಬಸವನಪುರ,ಸ್ವತಂತ್ರ ನಗರ,ಗಾಯಿತ್ರಿ ಬಡಾವಣೆ, ಅಯ್ಯಪ್ಪನಗರದ ಸುತ್ತಮುತ್ತಲಿನಿಂದ
ಅಪಾರ ಭಕ್ತರು ಭಾಗವಹಿಸಿ ಹೋಮಗಳು, ಅಭಿಷೇಕ, ಪೂಜಾ ಕಾರ್ಯಗಳಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿ ಪ್ರಸಾದವನ್ನ ಸ್ವೀಕರಿಸಿ ದೇವರ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು.
ಪುಕ್ಕಟೆ ಗ್ಯಾರಂಟಿಗಳಿಂದ ರಾಜ್ಯ ಸರ್ಕಾರ ದಿವಾಳಿ ಅಂಚಿನಲ್ಲಿದೆ – ಎಸ್.ಪಿ.ಸ್ವಾಮಿ ಆರೋಪ!
ದೇವಲಾಯಕ್ಕೆ ಬಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ
ಪಾನಕ ಮಜ್ಜಿಗೆಯನ್ನ ವಿತರಣೆ ಮಾಡಲಾಯಿತು. ಅನ್ನದನಕ್ಕೆ ನೂರಾರು ದಾನಿಗಳು ಸಹಾಯ ಮಾಡಿದ್ದು ವಿಷೇಶವಾಗಿತ್ತು.
ಇದೇ ಮೊದಲ ಬಾರಿಗೆ ಶ್ರೀ ಅಭಯ ಆಂಜನೇಯಸ್ವಾಮಿಯ ಪಲ್ಲಕ್ಕಿ ಮೆರವಣಿಗೆ ಮಾಡುತಿದ್ದು ಬಸವನಪುರ,ಸ್ವತಂತ್ರ ನಗರ,ಗಾಯಿತ್ರಿ ಬಡಾವಣೆ, ಅಯ್ಯಪ್ಪನಗರ ಎಲ್ಲಾ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿ ವೆಂಕಟೇಶ್,ಗ್ರಾಮಸ್ಥರಾದ ಎಲ್. ಮುನಿಸ್ವಾಮಿ, ಗಂಗಾಧರ್,ವಿ ಮಂಜುನಾಥ್, ಸುಬ್ರಮಣಿ,ಈಶ್ವರ್
ವಿಜಿ,ಸಂತು,ಗಂಗು,ರವಿ ಕಾರ್ತಿಕ್ ಹರಿಶ್,ಮೋಹನ್ ಮತ್ತಿತರರು ಇದ್ದರು.