ಗದಗ: ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ನೀರಿಗಾಗಿ ಖಾಲಿ ಕೊಡ ಹಿಡಿದು ನಾರಿಯರು ಪ್ರತಿಭಟನೆ ನಡೆಸಿದರು. ಕಳೆದ ಎರಡು ತಿಂಗಳಿಂದ ನೀರು ಪೂರೈಕೆ ಇಲ್ಲದೇ ಜನ್ರು ಹೈರಾಣು ಆಗಿದ್ದು,
ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿಯಲು ನೀರಿಲ್ಲ, ನಮಗೆ ನೀರು ಕೊಡಿ ಎಂದು ಪಿಡಿಓ ಜೊತೆ ವಾಗ್ವಾದಗಿಳಿದ್ದರು. ನೀವು ಪೈಪ್ ತರೋಕೇನು ದುಬೈಗೆ ಹೋಗ್ಬೇಕಾ ಅಂತಾ ಪಿಡಿಓಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದು, ಜನ್ರ ಪ್ರಶ್ನೆಗಳಿಗೆ ಪಿಡಿಓ ತಬ್ಬಿಬ್ಬಾಗಿದ್ದಾರೆ.