ಬೆಂಗಳೂರು:– ರಾಜ್ಯದಲ್ಲಿ ಇಂದು ಸಿಇಟಿ-2024 ಪರೀಕ್ಷೆ ನಡೆಯಲಿದೆ. ಇಂದು ಮತ್ತು ಏಪ್ರಿಲ್ 19ನೇ ತಾರೀಖು ಸಿಇಟಿ ಪರೀಕ್ಷೆ ನಡೆಯಲಿದೆ. ಪ್ರತಿದಿನ 2 ಪತ್ರಿಕೆಗಳಿಗೆ ಪರೀಕ್ಷೆ ಪರೀಕ್ಷೆ ನಡೆಯಲಿದ್ದು, ಏಪ್ರಿಲ್ 18 ಜೀವ ಶಾಸ್ತ್ರ ಮತ್ತು ಗಣಿತ ಶಾಸ್ತ್ರಕ್ಕೆ ಪರೀಕ್ಷೆ ನಡೆಯಲಿದೆ. ಏಪ್ರಿಲ್ 19 ಭೌತ ಶಾಸ್ತ್ರ ಮತ್ತು ರಸಾಯನ ಶಾಸ್ತ್ರಕ್ಕೆ ಪರೀಕ್ಷೆ ನಡೆಯಲಿದೆ.
ಕೆಂಪೇಗೌಡ ವಿಮಾನ ನಿಲ್ದಾಣದ ರನ್ವೇನಲ್ಲಿ ವೀಡಿಯೊ ಶೂಟ್ ಮಾಡಿದ್ದ ಯೂಟ್ಯೂಬರ್ ಅರೆಸ್ಟ್!
ಮೊದಲ ಅವಧಿಯ ಪರೀಕ್ಷೆ ಬೆಳ್ಳಗೆ 10:30-11:50ರವರೆಗೆ ನಡೆಯಲಿದ್ದು, ಎರಡನೇ ಅವಧಿ ಪರೀಕ್ಷೆ 2:30ಯಿಂದ 3:50ರವರೆಗೆ ನಡೆಯಲಿದೆ. ಅಭ್ಯರ್ಥಿಗಳಿಗೆ ಈಗಾಗಲೇ ಪ್ರವೇಶ ಪತ್ರವನ್ನ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದ್ದು, ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ತೋರಿಸಿದರೆ ಮಾತ್ರ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನೀಡಲಾಗುತ್ತದೆ.